ಮಾನವ ಅಂತರಿಕ್ಷ ಯೋಜನೆಗೆ ಫ್ರಾನ್ಸ್ ಜತೆ ಇಸ್ರೋ ಸಹಭಾಗಿತ್ವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಮಾನವ ಅಂತರಿಕ್ಷ ಯಾನ ಯೋಜನೆ ಸೇರಿದಂತೆ ಹಲವು ವಿಧದ ಕಾರ್ಯಕ್ರಮಗಳು ಜಂಟಿ ಸಹಭಾಗಿತ್ವದಲ್ಲಿ ಪ್ರವೇಶ ಪಡೆಯುತ್ತಿದ್ದು, ಇದರ ನಡುವೆ ಮೂರನೆ ಬಾರಿಗೆ ಜಂಟಿಯಾಗಿ ಉಪಗ್ರಹ ಉಡಾವಣೆಗೆ ಭಾರತ ಮತ್ತು ಫ್ರಾನ್ಸ್ ತಯಾರಿ ನಡೆಸಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

ಅಂತರಿಕ್ಷ ಇಲಾಖೆಯ ಕಾರ್ಯದ ರ್ಶಿಯೂ ಆಗಿರುವ ಶಿವನ್ ಅವರು ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ್ರಾನ್ಸ್ ದೇಶದ ಹಲವು ಸಂಸ್ಥೆಗಳು ಬಾಹ್ಯಾಕಾಶ ವಲಯದಲ್ಲಿ ಭಾರತದೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದಾರೆ.

ಕೇಂದ್ರ ಸರ್ಕಾರ ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿರುವ ಹೊಸ ಆಯಾಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಭಾರತದೊಂದಿಗೆ ಫ್ರಾನ್ಸ್ ಅತಿದೊಡ್ಡ ಪಾಲುದಾರರು ಎಂದು ಅವರು ಹೇಳಿದರು. ಇಸ್ರೋ ಅಧಿಕಾರಿಗಳ ಮೂಲಗಳ ಪ್ರಕಾರ, ಫ್ರಾನ್ಸ್ ಸ್ಪೇಸ್ ಏಜೆನ್ಸಿ (ಸಿಎನ್‍ಇಎಸ್) ಜತೆ ಕಳೆದ 2011ರಲ್ಲಿ ಮೆಗಾ ಟ್ರೋಪಿಕಿಸ್ ಮತ್ತು 2013ರಲ್ಲಿ ಸರಳ್ ಅಲ್ಟಿಕಾ ಎಂಬ ಬಾಹ್ಯಾಕಾಶ ಯೋಜನೆಯನ್ನು ಜಂಟಿಯಾಗಿ ಕೈಗೆತ್ತಿಕೊಂಡಿದೆ. ಪ್ರಸ್ತುತ ನಾವು ಮೂರನೆ ಯೋಜನೆಗೆ ತಯಾರಿ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಗಳು ಅಂತಿಮ ಹಂತ ತಲುಪಿದ್ದು, ಎರಡು ದೇಶಗಳಿಗೂ ಇದೊಂದು ದೊಡ್ಡ ಮೈಲಿಗಲ್ಲಾಗಲಿದೆ ಎಂದು ಹೇಳಿದರು. ಭಾರತ-ಫ್ರಾನ್ಸ್‍ನ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಮುಂದುವರಿದು ಈಗ ಮಾನವ ಅಂತರಿಕ್ಷ ಯಾನ, ಬಾಹ್ಯಾಕಾಶ ಯಾನ ಸಂಶೋಧನೆಗೂ ಮುಂದುವರಿದಿದೆ ಎಂದು ಹೇಳಿದ್ದಾರೆ.

Facebook Comments