ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸರಣಿ ಹಂತಕಿ ಜಾಲಿ ಜೋಸೆಫ್..!

ಈ ಸುದ್ದಿಯನ್ನು ಶೇರ್ ಮಾಡಿ

ಕೋಳಿಕೋಡ್ (ಕೇರಳ), ಫೆ.27- ಸರಣಿ ಹಂತಕಿ ಸೈನೆಡ್ ಜಾಲಿ ಜೋಸೆಫ್ (47) ಇಂದು ಮುಂಜಾನೆ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಳಿಕೋಡ್ ಜಿಲ್ಲಾ ಕಾರಾಗೃಹದಲ್ಲಿ ಇಂದು ಮುಂಜಾನೆ ಹರಿತವಾದ ಆಯುಧದಿಂದ ಸೊಂಟವನ್ನು ಕತ್ತರಿಸಿಕೊಂಡು ರಕ್ತಸ್ರಾವದಲ್ಲಿ ಜಾಲಿ ಜೋಸೆಫ್ ಒದ್ದಾಡುತ್ತಿದ್ದಳು.

ತಕ್ಷಣ ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈಕೆಗೆ ಹರಿತವಾದ ಆಯುಧ ಲಭಿಸಿದ್ದು ಎಲ್ಲಿಂದ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ತನ್ನ ಪತಿ, ಅತ್ತೆ-ಮಾವ ಮತ್ತು ಕುಟುಂಬದ ಇತರ ಮೂವರು ಸದಸ್ಯರಿಗೆ ಆಹಾರದಲ್ಲಿ ಸೈನೆಡ್ ಬೆರೆಸಿ ಕೊಂದಿದ್ದ ಆರೋಪದ ಮೇಲೆ ಕಳೆದ ವರ್ಷ ಅಕ್ಟೋಬರ್‍ನಲ್ಲಿ ಜಾಲಿ ಜೋಸೆಫ್‍ಳನ್ನು ಬಂಧಿಸಲಾಗಿತ್ತು.

Facebook Comments