ಟಿ-20 ಫೈನಲ್‍ ಪಂದ್ಯಕ್ಕೆ ಬಟ್ಲರ್ ಅಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್,ಸೆ.7-ಟಿ-20 ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ ಅಂತಿಮ ಪಂದ್ಯಕ್ಕಾಗಿ ತಂಡದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದೆ.

ಕಳೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಜೋಸ್ ಬಟ್ಲರ್ ಅವರು ತಮ್ಮ ಕುಟುಂಬದ ಜೊತೆ ಇರಬೇಕಾದ ಅವಿವಾರ್ಯತೆ ಎದುರಾಗಿರುವುದರಿಂದ ಅಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಇಂಡಿಯನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಈಗಾಗಲೇ ಸತತ ಎರಡು ಪಂದ್ಯಗಳಲ್ಲಿ ರೋಚಕ ಗೆಲುವು ಸಾಸಿರುವ ಇಂಗ್ಲೆಂಡ್, ಕೊನೆಯ ಪಂದ್ಯವನ್ನು ಗೆದ್ದು ಸರಣಿಯನ್ನು ವೈಟ್‍ವಾಶ್ ಮಾಡುವ ತವಕದಲ್ಲಿದೆ.

ಇದೇ ವೇಳೆ ಆಸ್ಟ್ರೇಲಿಯಾ ಮಾನ ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ವಾರ್ನರ್ ಮತ್ತು ಪಿಂಚ್ ಅದ್ಭುತ ಫಾರ್ಮ್‍ನಲ್ಲಿದ್ದರೂ ತಂಡಕ್ಕೆ ಅದೃಷ್ಟ ಒಲಿಯುತ್ತಿಲ್ಲ. ಮೊದಲ ಟಿ-20 ಪಂದ್ಯವನ್ನು ಸುಲಭವಾಗಿ ಗೆದ್ದಿದ್ದ ಇಂಗ್ಲೆಂಡ್ 2ನೇ ಪಂದ್ಯದಲ್ಲಿ ಕೇವಲ ಮೂರು ರನ್‍ಗಳಿಂದ ಜಯ ಸಾಸಿತ್ತು.

Facebook Comments

Sri Raghav

Admin