ಪಾಕ್ ಸೇನೆಯನ್ನು ದೂಷಿಸಿದ ಪತ್ರಕರ್ತನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಬಾದ್,ಸೆ.12- ಪಾಕಿಸ್ತಾನ ಸೇನೆಯನ್ನು ದೂಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಪತ್ರಕರ್ತ ಬಿಲಾಲ್ ಫಾರೂಕಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್‍ನಲ್ಲಿ ಸುದ್ದಿ ಸಂಪಾದಕರಾಗಿರುವ ಫಾರೂಕಿಯನ್ನು ಡಿಎಚ್‍ಎ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ ರಕ್ಷಣಾ ಪೊಲೀಸರ ನಿಲ್ದಾಣ ತನಿಖಾಧಿಕಾರಿ (ಎಸ್‍ಐಒ) ಬಂಧಿಸಿದ್ದಾರೆ ಎಂದು ಕರಾಚಿ ಪೊಲೀಸ್ ಮುಖ್ಯಸ್ಥ, ಹೆಚ್ಚುವರಿ ಇನ್ಸ್‍ಪೆಕ್ಟರ್ ಜನರಲ್ ಗುಲಾಮ್ ನಬಿ ಮೆಮನ್ ತಿಳಿಸಿದ್ದಾರೆ.

ಕಳೆದ ಸೆ.9ರಂದು ಜಾವೇದ್ ಖಾನ್ ಎಂಬವರು ನೀಡಿದ್ದ ದೂರಿನ ಮೇರೆಗೆ ಪತ್ರಕರ್ತನ ವಿರುದ್ಧ ಸೆಕ್ಷನ್ 500, 505, 11 ಮತ್ತು 20 ಎಲೆಕ್ಟ್ರಾನಿಕ್ ಅಪರಾಧಗಳ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಎಫ್‍ಐಆರ್ ಪ್ರಕಾರ, ಕಾರ್ಖಾನೆಯೊಂದರಲ್ಲಿ ಮೆಷಿನ್ ಆಪರೇಟರ್ ಮತ್ತು ಲ್ಯಾಂಡ್ಹಿ ಪ್ರದೇಶದ ಮಜೀದ್ ಕಾಲೋನಿ ನಿವಾಸಿಯಾಗಿರುವ ದೂರುದಾರ ಜಾವೇದ್ ಖಾನ್, ಸೆಪ್ಟೆಂಬರ್ 9 ರಂದು ಪಾಕಿಸ್ತಾನದ ಸೈನ್ಯದ ವಿರುದ್ಧ ಹೆಚ್ಚು ಆಕ್ಷೇಪಾರ್ಹ ಪೋಸ್ಟ್‍ಗಳನ್ನು ಮಾಡಿದ್ದಾರೆ.

ಧಾರ್ಮಿಕ ದ್ವೇಷ ಬಿತ್ತುವ ಉದ್ದೇಶದಿಂದ ಈ ವಿಷಯವನ್ನು ಹರಿಬಿಟ್ಟಿದ್ದಾರೆ. ಪಾಕ್ ಸೈನ್ಯದ ಬಗ್ಗೆಯೂ ದೂಷಣೆ ಮಾಡಿದ್ದಾರೆ. ಇವರ ವಿರುದ್ದ ಕಾನೂನಿ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರು.

ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಪಾಕಿಸ್ತಾನದಲ್ಲಿ ಪತ್ರಿಕಾ ಮಾಧ್ಯಮಗಳ ಮೇಲೆ ಯಾವುದೇ ದಬ್ಬಾಳಿಕೆ ಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಪತ್ರಕರ್ತರ ಮೇಲಿನ ಹಿಂಸಾಚಾರ, ಬೆದರಿಕೆಗಳು ಪಾಕಿಸ್ತಾನದ ಪರಿಸ್ಥಿತಿಯ ಸಂಪೂರ್ಣ ವಾಸ್ತವತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ.

Facebook Comments