ಲಾಕ್‍ಡೌನ್ ದೇಶದ ಜನರ ಜೀವ ಉಳಿಸುವ ಗಟ್ಟಿ ನಿರ್ಧಾರ : ನಡ್ಡಾ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ, ಸೆ.5- ದೇಶದ 130 ಕೋಟಿ ಜನರ ಜೀವ ಉಳಿಸಲು ಲಾಕ್‍ಡೌನ್ ಮಾಡುವ ಜತೆಗೆ ಗಟ್ಟಿ ನಿರ್ಧಾರ ಕೈಗೊಂಡು ಆರ್ಥಿಕತೆಯನ್ನು ಕಾಪಾಡುವ ದೊಡ್ಡ ಕೆಲಸವನ್ನು ಎನ್‍ಡಿಎ ಸರ್ಕಾರ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ಇಡೀ ವಿಶ್ವವೇ ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನಮ್ಮ ದೇಶದ ಜನರ ಜೀವ ಉಳಿಸುವ ಸಲುವಾಗಿ ಇಡೀ ರಾಷ್ಟ್ರವನ್ನು ಲಾಕ್‍ಡೌನ್ ಮಾಡುವ ಅನಿವಾರ್ಯವಾಗಿತ್ತು. ಇದು ಅಷ್ಟು ಸುಲಭದ ನಿರ್ಧಾರವಾಗಿರಲಿಲ್ಲ.

ಮುಂದಿನ ಆಲೋಚನೆಯನ್ನು ಬದಿಗಿಟ್ಟು ಗಟ್ಟಿ ನಿರ್ಧಾರವನ್ನು ಮಾಡಬೇಕಾಯಿತು ಎಂದು ನಡ್ಡಾ ಇಂದಿಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ವಿಶ್ವದ ಪ್ರಭಾವಿ ರಾಷ್ಟ್ರಗಳೆಂದು ಗುರುತಿಸಿಕೊಂಡಿರುವವರು ಹೆಣಗಾಡುತ್ತಿದ್ದರು. ಆದರೆ, ನಮ್ಮಲ್ಲಿ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು. ಇದರಿಂದ ಜೀವ ಉಳಿಸುವ ಕಾರ್ಯವೂ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೆ ವಿಶ್ವಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಆರ್ಥಿಕತೆ ಕುಸಿದರೂ ಕೂಡ ನಮ್ಮ ಜನರ ಆತ್ಮವಿಶ್ವಾಸ ಕುಸಿದಿಲ್ಲ ಎಂಬುದನ್ನು ತೋರಿಸಲಾಗುವುದು ಎಂದು ವಿರೋಧ ಪಕ್ಷಗಳಿಗೆ ಅವರು ತಿರುಗೇಟು ನೀಡಿದ್ದಾರೆ.

Facebook Comments