ಕೊರೊನಾ ಮೇಲಿನ ಕಡುಕೋಪವನ್ನು ಕೊಡಲಿ ಎಸೆದು ತೀರಿಸಿಕೊಂಡರು..!

ಈ ಸುದ್ದಿಯನ್ನು ಶೇರ್ ಮಾಡಿ

ಅಮಾನ್ (ಜೋರ್ಡಾನ್), ಆ.21- ಕಿಲ್ಲರ್ ಕೊರೊನಾ ವಿಶ್ವದ ಬಹುತೇಕ ಎಲ್ಲ ದೇಶಗಳನ್ನು ಕಾಡುತ್ತಿವೆ. ಈ ಹೆಮ್ಮಾರಿಯ ದಾಳಿಯಿಂದ ವ್ಯಾಪಕ ಸಾವು-ನೋವು ಮತ್ತು ಅಪಾರ ಹಾನಿಯೊಂದಿಗೆ ಜನಜೀವನ ಅಯೋಮಯವಾಗಿದೆ.

ಕೋವಿಡ್-19 ವೈರಸ್ ಮೇಲಿನ ಕಡುಕೋಪವನ್ನು ಜೋರ್ಡಾನ್ ಜನತೆ ವಿಚಿತ್ರ ರೀತಿಯಲ್ಲಿ ತೀರಿಸಿಕೊಳ್ಳುತ್ತಿದ್ದಾರೆ.. ಹೇಗೆ..? ನೀವೇ ಓದಿ..! ಜೋರ್ಡಾನ್ ರಾಜಧಾನಿ ಅಮಾನ್‍ನಲ್ಲಿರುವ ಮಳಿಗೆಯೊಂದರಲ್ಲಿ ನಿರ್ದಿಷ್ಟ ಗುರಿಗಳತ್ತ ಜನರು ಕೊಡಲಿಗಳನ್ನು ಎಸೆದು ಕಿಲ್ಲರ್ ಕೊರೊನಾ ಮಹಾಮಾರಿ ಮೇಲಿನ ಕೋಪವನ್ನು ತೀರಿಸಿಕೊಳ್ಳುತ್ತಿದ್ದಾರೆ.

ಅಮಾನ್ ನಗರಿಯಲ್ಲಿರುವ ಈ ಸ್ಥಳದ ಹೆಸರು ಆಕ್ಸ್ ರೇಜ್ ರೂಮ್ಸ್. ಜೋರ್ಡಾನ್ ಮಂದಿ ಕೋಪಿಷ್ಠರು. ತಮ್ಮ ಸಿಟ್ಟು ನೆತ್ತಿಗೇರಿದಾಗ ಈ ಜನರು ಟೆಲಿವಿಷನ್‍ಗಳನ್ನು ಒಡೆದು ಹಾಕುತ್ತಾರೆ.

ಇಲ್ಲವೆ ಕೈಗೆ ಸಿಕ್ಕ ವಸ್ತುಗಳನ್ನು ಗೋಡೆಗೆ ಅಪ್ಪಳಿಸಿ ಪುಡಿ ಮಾಡುತ್ತಾರೆ. ಈಗಂತೂ ಜೋರ್ಡಾನ್ ಮಂದಿಗೆ ಡೆಡ್ಲಿ ಕೋವಿಡ್ ವೈರಸ್ ಮೇಲೆ ಕೆಂಡದಂಥ ಕೋಪ.

ಇವರ ಕೋಪವನ್ನು ಶಮನ ಮಾಡಲು ಕ್ರಿಯೇಟಿವ್ ಔಟ್‍ಲೆಟ್‍ಗಳನ್ನು ತೆರೆಯಲಾಗಿದೆ. ಇಂಥ ಮಳಿಗೆಗಳಲ್ಲಿ ಜನರು ಕೊಡಲಿಗಳನ್ನು ನಿರ್ದಿಷ್ಟ ಗುರಿಯತ್ತ ಎಸೆದು ತಮ್ಮ ತೋಪವನ್ನು ಕಡಿಮೆ ಮಾಡಿಕೊಳ್ಳಬಹುದು. ಜನರು ತಮ್ಮ ಕೋಪವನ್ನು ತಗ್ಗಿಸಲು ಅನೇಕ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಕೋಪದ ಕೈಗೆ ಬುದ್ಧಿ ಕೊಟ್ಟು ಅನಾಹುತಗಳಿಗೆ ಕಾರಣವಾಗುವ ಬದಲು ನಮ್ಮ ಮಳಿಗೆಗೆ ಬಂದು ಟಾರ್ಗೆಟ್ ಕಡೆ ಕೊಡಲಿಗಳನ್ನು ಎಸೆದರೆ ಕೋಪವೂ ಕಡಿಮೆಯಾಗುತ್ತದೆ ಅಲ್ಲದೇ ಇಂಥ ಕೋಪಿಷ್ಟರ ಸಿಟ್ಟುಸೆಡವು ಇಳಿದು ಮನರಂಜನೆಯೂ ಲಭಿಸುತ್ತದೆ ಎನ್ನುತ್ತಾರೆ ಆಕ್ಸ್ ರೇಜ್ ರೂಮ್ ಮಾಲೀಕ ಅಲಾದ್ದೀನ್ ಅಟ್ಟನ್.

ಈಗ ಕೋವಿಡ್ ಹಾವಳಿ ಇರುವುದರಿಂದ ಕೆಲವು ನಿರ್ಬಂಧಗಳಿವೆ. ಇವುಗಳ ನಡುವೆಯೂ ಹೊಸ ಮನರಂಜನೆ ಮಾರ್ಗಗಳನ್ನು ಹುಡುಕುವ ಮಂದಿಗೆ ಇದು ಸೂಕ್ತ ಸ್ಳಳ. ಇಲ್ಲಿಗೆ ಬರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅಲಾದ್ದೀನ್.

ಇತ್ತೀಚಿನ ದಿನಗಳಲ್ಲಿ ಇದು ನನ್ನ ಅಚ್ಚುಮೆಚ್ಚಿನ ಚಟುವಟಿಕೆಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಇಲ್ಲಿಗೆ ಆಗಾಗ ಭೇಟಿ ನೀಡುವ ದಿಯಾ ಅಲ್ ಯಾಹ್ಯ.

ಕೋಪ-ತಾಪ ಮತ್ತು ಹತಾಶೆಯನ್ನು ವ್ಯಕ್ತಪಡಿಸಲು ಇದು ಒಳ್ಳೆಯ ಸ್ಥಳ. ಕೊರೊನಾ ವೈರಸ್ ದಾಳಿ ಸಂದರ್ಭದಲ್ಲಿ ನಮಗೆ ಬೇರೆ ಮನರಂಜನೆ ಲಭಿಸುತ್ತಿಲ್ಲ. ಹೀಗಾಗಿ ಇದು ತುಂಬಾ ತಮಾಷೆಯಾಗಿರುತ್ತದೆ ಎಂದು ಯಾಹ್ಯ ಹೇಳುತ್ತಾರೆ.

Facebook Comments

Sri Raghav

Admin