2,000 ಹಾಸಿಗೆಗಳ 3 ಆಸ್ಪತ್ರೆ ತೆರೆಯಲು ಮುಂಬೈ ಪಾಲಿಕೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ 12 – ಕೋವಿಡ್ -19 ಪ್ರಕರಣಗಳ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ, ಮುಂದಿನ ಐದು ವಾರಗಳಲ್ಲಿ ಮುಂಬಯಿಯಲ್ಲಿ ಮೂರು ದೊಡ್ಡ ಗಾತ್ರದ ಆಸ್ಪತ್ರೆಗಳನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಪ್ರತಿಯೊಂದು ವೈದ್ಯಕೀಯ ಸೌಲಭ್ಯಗಳು 200 ಐಸಿಯು ಹಾಸಿಗೆ ಗಳು ಮತ್ತು ಶೇ.70ರಷ್ಟು ಆಮ್ಲಜನಕ ಹಾಸಿಗೆಗಳು ಸೇರಿದಂತೆ 2,000 ಹಾಸಿಗೆಗಳ ಸಾಮಥ್ರ್ಯವನ್ನು ಹೊಂದಿದ್ದು, ಅವುಗಳನ್ನು ನಗರದ ಮೂರು ವಿಭಿನ್ನ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು ಎಂದು ನಗರ ನಾಗರಿಕ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ.

ಸಿಸಿಸಿ 2 ಸೌಲಭ್ಯಗಳನ್ನು ಕೆಲ 4 ಸ್ಟಾರ್ ಮತ್ತು 5 ಸ್ಟಾರ್‍ಹೋಟೆಲ್‍ಗಳನ್ನು ಸಹ ಪಡೆದು ಕೊಳ್ಳಲಿದ್ದು ಅವನ್ನು ಖಾಸಗಿ ಆಸ್ಪತ್ರೆಗಳ ವೃತ್ತಿಪರರು ನಡೆಸುತ್ತಾರೆ. ಕೊರೊನದಿಂದ ಗಣನೀಯವಾಗಿ ಚೇತರಿಸಿಕೊಂಡವರನ್ನು ಸಿಸಿಸಿ 2 ಸೌಲಭ್ಯಗಳಿಗೆ ಸ್ಥಳಾಂತರಿಸುವ ಮೂಲಕ ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಹಾಸಿಗೆಗಳು ಲಭ್ಯವಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದ್ದು, ಇದನ್ನು ವೃತ್ತಿ ಪರ ವೈದ್ಯರು ನಿರ್ವಹಿಸಲಿದ್ದಾರೆ ಎಂದು ಬಿಎಂಸಿ ಆಯುಕ್ತರು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ ಮುಂಬೈನಲ್ಲಿ ಪ್ರಸ್ತುತ 92,464 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. 24 ವಾರ್ಡ್ ವಾರ್ ರೂಮ್‍ಗಳು ಮತ್ತು ದೊಡ್ಡ ಗಾತ್ರದ ಆಸ್ಪತ್ರೆಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ನಿಖರ ಮತ್ತು ಹೆಚ್ಚು ಕಾರ್ಯ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲು ನಾಗರಿಕ ಸಂಸ್ಥೆ ನಿರ್ಧರಿಸಿದ್ದು ನೋಡಲ್ ಅಧಿಕಾರಿಗಳು ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.

Facebook Comments