ಕಿರಿಯ ಹಾಕಿ ವಿಶ್ವಕಪ್‍ನಲ್ಲಿ ವಿದೇಶಿ ಆಟಗಾರರಿಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ. 22- ಕೊರೊನಾ ನಡುವೆಯೂ ಮುಂದಿನ ತಿಂಗಳಿನಿಂದ ನಡೆಯಲಿರುವ ಕಿರಿಯರ ಹಾಕಿ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು ವಿದೇಶಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ನಿರ್ದೇಶಕ ಎಲ್.ಎಸ್.ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನವೆಂಬರ್ 25 ರಿಂದ ಡಿಸೆಂಬರ್ 5ರವರೆಗೂ ಭುವನೇಶ್ವರದ ಕಾಳಿಂಗ ಕ್ರೀಡಾಂಗಣದಲ್ಲಿ ಎಫ್‍ಐಎಚ್ ಕಿರಿಯರ ವಿಶ್ವ ಹಾಕಿ ಸರಣಿಯು ನಡೆಯಲಿದ್ದು ವಿದೇಶದಿಂದ ಬರುವ ಆಟಗಾರರು ಕ್ವಾರಂಟೈನ್ ಅವ ಮುಗಿದ ನಂತರ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ತಗ್ಗಿರುವುದರಿಂದ ಕಿರಿಯರ ಹಾಕಿ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವ ವಿದೇಶಿ ಆಟಗಾರರಿಗೆ ಕಡ್ಡಾಯವಾಗಿ ಆರ್‍ಟಿ ಪಿಸಿಆರ್ ಪರೀಕ್ಷೆಯನ್ನು ಮಾಡಲಾಗುವುದು, ಇದಾಗಿಯೂ ಆಟಗಾರರು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಗಾಗುವುದು ಅವಶ್ಯಕ ಎಂದು ಎಲ್.ಎಸ್.ಸಿಂಗ್ ಅವರು ತಿಳಿಸಿದ್ದಾರೆ.

ಕೊರೊನಾದ ಹಿನ್ನೆಲೆಯಲ್ಲಿ ಈಗಾಗಲೇ ಇಂಗ್ಲೆಂಡ್ ತಂಡವು ಟೂರ್ನಿಯಿಂದ ಹೊರಗುಳಿದಿ ರುವುದರಿಂದ ಪೋಲ್ಯಾಂಡ್‍ಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸ ಲಾಗಿದೆ.

Facebook Comments