ಮಾಸ್ಟರ್, ಅವೇಂಜರ್ ದಾಖಲೆ ಉಡೀಸ್ ಮಾಡಿದ ರಾಖಿ ಭಾಯ್..!
ಬೆಂಗಳೂರು, ಜ. 8- ರಾಂಕಿಂಗ್ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಮುನ್ನ ದಿನ ಬಿಡುಗಡೆಗೊಂಡ ಕೆಜಿಎಫ್ 2 ಚಿತ್ರದ ಭರ್ಜರಿ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಗೆ ಅರ್ಹವಾದ ವೀಕ್ಷಣೆಗೆ ಪಾತ್ರವಾಗಿದೆ. 35ನೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಂಕಿಂಗ್ ಸ್ಟಾರ್ ಯಶ್ಗೆ ಭರ್ಜರಿ ಗಿಫ್ಟ್ ಆಗಿದೆ.
ಯಶ್ರ ಹುಟ್ಟುಹಬ್ಬದ ಅಂಗವಾಗಿ ಇಂದು ಕೆಜಿಎಫ್ 2 ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲು ಹೊಂಬಾಳೆ ಪ್ರೊಡಕ್ಷನ್ಸ್ನವರು ಆಲೋಚಿಸಿದ್ದರಾದರೂ ಕಿಡಿಗೇಡಿಗಳ ಕೈವಾಡದಿಂದ ಟೀಸರ್ ನಿನ್ನೆಯೇ ಲೀಕ್ ಆಗಿದ್ದರಿಂದ ಅಧಿಕೃತ ಟೀಸರ್ ಅನ್ನು ಚಿತ್ರತಂಡವು ಬಿಡುಗಡೆ ಮಾಡಿದೆ.
ಕೆಜಿಎಫ್ ಚಿತ್ರದ ಮೂಲಕ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಯಶ್ ಅವರ ಬರ್ತ್ಡೇ ಅನ್ನು ದೇಶದ ವಿವಿಧ ರಾಜ್ಯಗಳಲ್ಲೂ ಆಚರಿಸಿರುವುದು ಸಂತಸದ ವಿಷಯವಾದರೆ, ನಿನ್ನೆ ಬಿಡುಗಡೆಗೊಂಡ ಕೆಜಿಎಫ್ 2 ಚಿತ್ರದ ಟೀಸರ್ ಕೇವಲ 49 ನಿಮಿಷಗಳಲ್ಲೇ 5 ಮಿಲಿಯನ್ ವೀಕ್ಷಕರನ್ನು ಗಳಿಸುವ ಮೂಲಕ ಹಾಲಿವುಡ್ ಚಿತ್ರಗಳ ದಾಖಲೆಯನ್ನೇ ಮುರಿದುಹಾಕಿದೆ.
ಇದುವರೆಗೂ ಕೆಜಿಎಫ್ 2 ಚಿತ್ರದ ಟೀಸರ್ ಅನ್ನು ಕೇವಲ 14 ಗಂಟೆಗಳ ಒಳಗೆ 2 ಕೋಟಿ 13 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ 30ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು ಇದು ಭಾರತೀಯ ಇತಿಹಾಸದಲ್ಲಿ ಅತ್ಯಧಿಕ ದಾಖಲೆಯಾಗಿದೆ.
# ಮಾಸ್ಟರ್, ಅವೇಂಜರ್ ದಾಖಲೆ ಉಡೀಸ್:
ರಾಕಿ ಭಾಯ್ನ ಗತ್ತು ಯಾರಿಗೂ ಕಡಿಮೆ ಇಲ್ಲ ಎಂಬುದು ಟೀಸರ್ ಕೂಡ ಸಾಬೀತುಪಡಿಸಿದೆ. ಈ ಚಿತ್ರದ ಟೀಸರ್ ಅನ್ನು ದಾಖಲೆ ಮಟ್ಟದಲ್ಲಿ ವೀಕ್ಷಕರು ವೀಕ್ಷಿಸುವ ಮೂಲಕ ಹಾಲಿವುಡ್ ಅವೇಂಜರ್ ಮತ್ತು ಕಾಲಿವುಡ್ನ ಮಾಸ್ಟರ್ ಚಿತ್ರಗಳ ದಾಖಲೆಯನ್ನು ಉಡೀಸ್ ಮಾಡಿದೆ.
ಇತ್ತೀಚೆಗೆ ಬಿಡುಗಡೆಗೊಂಡಿದ್ದ ಇಳಯದಳಪತಿ ವಿಜಯ್ ಹಾಗೂ ವಿಜಯ್ಸೇತುಪತಿ ಅಭಿನಯದ ಮಾಸ್ಟರ್ ಚಿತ್ರದ ಟೀಸರ್ ಅನ್ನು 16 ಗಂಟೆಗಳಲ್ಲಿ 16 ಲಕ್ಷ ಲೈಕ್ಸ್ ಪಡೆದಿದ್ದರೆ, 2018ರ ಡಿಸೆಂಬರ್ನಲ್ಲಿ ಬಿಡುಗಡೆಗೊಂಡಿದ್ದ ಅವೇಂಜರ್ಸ್ ದಿ ಎಂಡ್ ಗೇಮ್ ಇದುವರೆಗೂ ಪಡೆದಿರುವುದು 32 ಲಕ್ಷ ಲೈಕ್ಸ್ಗಳನ್ನಷ್ಟೇ ಆದರೆ ಕೆಜಿಎಫ್ 2 ಬಿಡುಗಡೆಗೊಂಡ 49 ನಿಮಿಷಗಳಲ್ಲೇ 5 ಮಿಲಿಯನ್ ವೀಕ್ಷಿಸಿದ್ದಾರೆ, ಈ ಹಿಂದೆ ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ಪೀಸ್ಗೆ 26 ಲಕ್ಷ ಲೈಕ್ಸಂ ಬಂದಿದ್ದವು, ಇನ್ನು ಸುಶಾಂತ್ಸಿಂಗ್ರಜಪೂತ್ ಅಭಿನಯದ ದಿಲ್ ಬೆಚಾರ ಟ್ರೇಲರ್ ಅನ್ನು 53 ಲಕ್ಷ ಮಂದಿ ಲೈಕ್ ಮಾಡಿದ್ದರು.
ಆರಂಭದಿಂದಲೂ ಕುತೂಹಲವನ್ನು ಮೂಡಿಸಿಕೊಂಡು ಬರುತ್ತಿರುವ ಕೆಜಿಎಫ್2 ಚಿತ್ರದ ಟೀಸರ್ಗೆ ಉತ್ತಮ ರೆಸ್ಪಾನ್ಸ್ ಬರುತ್ತಿರುವುದರಿಂದ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಕಾತರಿಸುತ್ತಿದ್ದಾರೆ.