ಪ್ರಸಿದ್ಧ ಚಿತ್ರನಿರ್ದೇಶಕ ಸೇತುಮಾಧವನ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ,ಡಿ.24-ಮಲಯಾಳಂನಲ್ಲಿ ಅನೇಕ ಆದರ್ಶಮಯ, ಮೈಲುಗಲ್ಲೆನಿಸುವ, ಮಾರ್ಗದರ್ಶಿ ಚಲನಚಿತ್ರಗಳನ್ನು ನಿರ್ದೇಶಿಸಿ ದಂತಕಥೆ ಎನಿಸಿಕೊಂಡಿದ್ದ ಪ್ರಶಸ್ತಿ ವಿಜೇತ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಕೆ.ಎಸ್.ಸೇತುಮಾಧವನ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.

90 ವರ್ಷ ವಯಸ್ಸಿನ ಸೇತುಮಾಧವನ್ ಅವರು ಕೆಲ ಕಾಲದಿಂದ ವಯೋಸಹಜ ಅನಾರೊಗ್ಯದಿಂದ ಬಳಲುತ್ತಿದ್ದರು ಎಂದು ಮೂಲಗಳು ಹೇಳಿವೆ.
ಹಲವಾರು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದ ಸೇತುಮಾಧವನ್ ಅವರು 1960ರ ದಶಕದಿಂದ 60 ವರ್ಷಗಳ ತಮ್ಮ ಸಿನಿ ವೃತ್ತಿಜೀವನದಲ್ಲಿ ಐದು ಭಾಷೆಗಳಲ್ಲಿ 60ಕ್ಕೂ ಅಧಿಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದರು.

ಮಲಯಾಳಂ ಅಲ್ಲದೆ ಅವರು ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳನ್ನೂ ನಿರ್ದೇಶಿಸಿದ್ದರು. ಒಡಯಿಲ್ ನಿನ್ನು, ಅನುಭವಂಗಳ್ ಪಳಿಚಕಳ್, ಒಫ್ಲೋಲ್, ಅರಣಜಿಕನೀರಂ, ಅಚ್ಚನಮ್ ಒಪ್ಪಾಯುಂ ಮುಂತಾದ ಚಿರನೂತನ ಚಿತ್ರಗಳು ಮಲಯಾಳಂ ಚಿತ್ರರಂಗದ ಮೈಲುಗಲ್ಲುಗಳೆನಿಸಿವೆ. ಇವೆಲ್ಲವೂ ಸೇತುಮಾಧವನ್ ಅವರ ಕೊಡುಗೆಗಳಾಗಿವೆ.

Facebook Comments