ಚಿಕ್ಕಬಳ್ಳಾಪುರದಲ್ಲಿ ದಾಖಲೆ ಬರೆದ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಡಿ. 9- ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ 84,381 ಬಾರಿ ಬಹುಮತದೊಂದಿಗೆ ವಿಜಯಪತಾಕೆ ಹಾರಿಸ್ದಿರೆ.  ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಎಂ.ಆಂಜನಪ್ಪ 49587 ಮತಗಳನ್ನು ಪಡೆದರೆ ಜೆಡಿಎಸ್ ಎನ್. ರಾಧಾಕೃಷ್ಣ 35,869 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಮೊದಲ ಹಂತದ ಮತ ಎಣಿಕೆಯಿಂದಲೂ ಹಿಂದಿಕ್ಕಿ ಕೊನೆಯ 26 ನೇ ಸುತ್ತಿನವರೆವಿಗೂ ಸಾವಿರ ಎರಡು ಸಾವಿರ ಮತಗಳ ಅಂತರದಲ್ಲಿಯೇ ಮುಂದೆ ಸಾಗುತ್ತಿದ್ದ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಜಿಲ್ಲಾಯಲ್ಲಿಯೇ ಪ್ರಪ್ರಥಮ ಬಾರಿಗೆ ಖಾತೆ ತೆರೆದಂತಾಯ್ತು.

ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅತ್ಯಂತ ಬಿಗಿಭದ್ರತೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮತ್ತು ಚುನಾವಣಾಧಿಕಾರಿ ರಘುನಂದನ್ , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ್ ಖರೆ ನೇತೃತ್ವದಲ್ಲಿ ಚುನಾವಣಾ ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಿತು.

ಕ್ಷೇತ್ರದ 254 ಬೂತ್‍ಗಳ ಒಟ್ಟು 1,74,127 ಮತಗಳ ಎಣಿಕೆ ನಡೆದಿದ್ದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಟ್ಟು 20020 ಮತದಾರರಿದ್ದು, 88089 ಪುರುಷರು ಹಾಗೂ 86038 ಮಹಿಳೆಯರು ಸೇರಿದಂತೆ ಒಟ್ಟು 1,74,127 ಮತದಾರರು ಮತ ಚಲಾವಣೆ ಮಾಡಿದ್ದರು. ಇತಿಹಾಸದಲ್ಲಿಯೇ ಇದೊಂದು ಹೊಸ ಮೈಲಿಗಲ್ಲು ಎಂಬಂತೆ ಬಿಂಬಿತವಾಗಿದೆ.

ಮತದಾನ ಫಲಿತಾಂಶ ತಿಳಿಯಲು ಬಿಬಿರಸ್ತೆಯ ಸರ್ಕಾರಿ ಜ್ಯೂನಿಯರ್ ಕಾಲೇಜು ಮುಂಭಾಗ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ತಮ್ಮ ತಮ್ಮ ಅಭ್ಯರ್ಥಿಗಳ ಆಗಿಂದ್ದಾಗ್ಗೆಯ ಫಲಿತಾಂಶದ ಕಾತರತೆಗೆ ದ್ವನಿವರ್ಧಕದ ಮೂಲಕ ಆಲಿಸಿ ಕೂತಿದ್ದರೆ ಬಿಜೆಪಿ ಶತಕದತ್ತ ಮುನ್ನಡೆಯುತಿದ್ದಂತೆ ಇನ್ನಿತರ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಕಾರ್ಯಕರ್ತರು ಎಣಿಕೆ ಕೇಂದ್ರ ದಿಂದ ಹೊರ ನಡೆದರು. ಸುಧಾಕರ್ ಜಯ ಗಳಿಸಿದ ನಂತರ ಚುನಾವಣಾಧಿಕಾರಿ ರಘುನಂದನ್ ಅವರು ಗೆಲುವಿನ ಆಯ್ಕೆ ಪ್ರಮಾಣ ಪತ್ರ ನೀಡಿ ಶುಭ ಕೋರಿದರು.

Facebook Comments