ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆಯಾಗುತ್ತಾ..? ಸಚಿವ ಸುಧಾಕರ್ ಹೇಳೋದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಪುನಃ ಲಾಕ್ ಡೌನ್ ವಿಸ್ತರಣೆ ಮಾಡುವ ಬಗ್ಗೆ ತಜ್ಞರು ನೀಡಿರುವ ವರದಿಯ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಂತರ ತೀರ್ಮಾನ ಮಾಡುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ‌.ಸುಧಾಕರ್ ಹೇಳಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು,ತಜ್ಞರು ತಡ ರಾತ್ರಿಯವರೆಗೂ ಸಭೆ ಮಾಡಿದ್ದಾರೆ.ಈಗಾಗಲೇ ವರದಿ ಸಿದ್ದವಾಗಿದ್ದು,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಿದ್ದೇವೆ ಎಂದು ತಿಳಿಸಿದರು.

ಮೊದಲು ಸಂಬಂಧ ಸಿ‌ಎಂ ಬಳಿ ಚರ್ಚೆ ಮಾಡುತ್ತೇವೆ.ಸಂಪುಟದಲ್ಲೂ ಕೂಡಾ ಈ ಬಗ್ಗೆ ಚರ್ಚೆಯಾಗಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.ತಜ್ಞರು ನನಗೂ ಒಂದು ವರದಿಯನ್ನು ನೀಡಲಿದ್ದಾರೆ.ನಾನು ಅರ್ಧಗಂಟೆಯಲ್ಲಿ ಪಡೆಯುತ್ತೇನೆ ಎಂದು ಮಾಹಿತಿ ಒದಗಿಸಿದರು.

ಕೆಲಸ ಸಚಿವರು ಲಾಕ್ ಡೌನ್ ಬಗ್ಗೆ ವಿವಿಧ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,ಸಚಿವರು ಮಾಹಿತಿ ಇಲ್ಲದೆ ತಾಡಬಾರದು.ಜನರ ಭಾವನೆ ಮೇಲೆ ಸಚಿವರು ಮಾತಾಡಿರಬಹುದು‌ ಎಂದು ಸಲಹೆ ಮಾಡಿದರು.

ಏಕಾಏಕಿಯಾಗಿ ಏನು ನಿರ್ಧಾರ ಮಾಡಲು ಆಗುವುದಿಲ್ಲ.ತಜ್ಞರ ವರದಿ ಆಧಾರಿಸಿ ಮುಂದಿನ ತೀರ್ಮಾನ ಮಾಡಬೇಕಾಗುತ್ತೆ.ವೈಜ್ಞಾನಿಕ ನೆಲಗಟ್ಟಿನ ಮೇಲೆ ನಾವು ಲಾಕ್ ಡೌನ್ ಬಗ್ಗೆ ತೀರ್ಮಾನ ಮಾಡಬೇಕು ಎಂದು ಸ್ಪಷ್ಟಪಡಿಸಿದರು. ಈ ಎಲ್ಲಾ ಅಂಶಗಳನ್ನ ಸಚಿವರ ಗಮನಕ್ಕೂ ತರುತ್ತೇವೆ.ಸಿಎಂ ಕೂಡಾ ಈ ಬಗ್ಗೆ ಗಂಭೀ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು..

ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೋಡಿದ ಸುದಾಕರ್ ಈ ಸಂದರ್ಭದಲ್ಲಿ ರಾಜಕೀಯ ಮಾತಮಾಡುವುದು ಅಸಂಬಂಧ.ಸಿಎಂ ಯಡಿಯೂರಪ್ಪ ರವರು ಕುರ್ಚಿ ಮೇಲೆಛ ಇದ್ದಾರೆ .ಅವರು ಇರುವಾಗ ಮತ್ತೇಕೆ ಬದಲಾವಣೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ‌ಆಕ್ಷೇಪಿಸಿದರು.

Facebook Comments

Sri Raghav

Admin