ಉದ್ಯಮಿ, ಕಲಾಪೋಷಕ ಕೆ.ವಿ.ಮೂರ್ತಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.8- ಉದ್ಯಮಿಯಾಗಿದ್ದ , ಕಲಾ ಪೋಷಕರಾಗಿದ್ದ ಕೆ.ವಿ.ಮೂರ್ತಿ (90) ಗುರುವಾರ ನಸುಕಿನಲ್ಲಿ ನಿಧನರಾದರು.
ಜಯಲಕ್ಷ್ಮಿಪುರಂನ ಕಾಳಿದಾಸ ರಸ್ತೆಯ 2ನೇ ಅಡ್ಡರಸ್ತೆಯ ಬಳಿಯಿರುವ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಅವರು ನಿಧನರಾದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

ಸಿವಿಲ್ ಎಂಜಿನಿಯರ್ ಆಗಿದ್ದ ಅವರು ಸಮುದ್ರ ಬಳಿಯ ಬಂದರು ಕಟ್ಟುವಲ್ಲಿ ಶ್ರಮಿಸಿದರು. ಮಂಗಳೂರು, ಚೆನ್ನೈ, ವಿಶಾಖಪಟ್ಟಣಂನ ಬಂದರುಗಳ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸಿದರು.ನಂತರ ಮೈಸೂರಿನಲ್ಲಿ ನೆಲೆ ನಿಂತು ಅಗ್ರೊ ಕೆಮಿಕಲ್ ಹಾಗೂ ಕಾಫಿ ಡಿಕಾಕ್ಷನ್ ಉದ್ಯಮದಲ್ಲಿ ತೊಡಗಿಕೊಂಡರು. ಜೊತೆಗೆ ಕಲಾ ಪೋಷಕರೂ ಆದರು.

ನಾದಬ್ರಹ್ಮ ಸಂಗೀತ ಸಭಾ, ಜೆಎಸ್‍ಎಸ್ ಸಂಗೀತ ಸಭಾ, ತ್ಯಾಗರಾಜ ಸಂಗೀತ ಸಭಾ ಹಾಗೂ ವಸುಂಧರಾ ಪಫಾರ್ಮಿಂಗ್ ಆಟ್ರ್ಸ್ ಸೆಂಟರ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅವರ ಅಂತ್ಯಕ್ರಿಯೆ ಗೋಕುಲಂನ ಚಿರಶಾಂತಿ ಧಾಮದಲ್ಲಿ ಇಂದು ಬೆಳಗ್ಗೆ ನಡೆಯಿತು.

Facebook Comments

Sri Raghav

Admin