ತಾಲಿಬಾನ್ ಸರ್ಕಾರ ರಚನೆ ಹಿಂದೆ ಪಾಕ್ ಷಡ್ಯಂತ್ರ : ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

xವಾಷಿಂಗ್ಟನ್, ಸೆ.15-ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಲು ಪಾಕಿಸ್ತಾನದ ಪಾತ್ರ ಮಹತ್ತರವಾಗಿದೆ. ಕಾಬೂಲ್ ಮತ್ತು ಇಸ್ಲಾಮಾಬಾದ್‍ನಲ್ಲಿ ಪಾಕ್ ನಿರ್ವಹಿಸುತ್ತಿರುವ ಪಾತ್ರ ಭಾರತಕ್ಕೆ ಒಳ್ಳೆ ಸಂದೇಶ ರವಾನಿಸುತ್ತಿಲ್ಲ ಎಂದು ಅಮೆರಿಕಾದ ಪ್ರಮುಖ ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಆಫ್ಘಾನಿಸ್ತಾನ ವಿಚಾರ ಕುರಿತಂತೆ ಮಾತನಾಡಿರುವ ರಿಪಬ್ಲಿಕನ್ ಸಂಸದ ಮಾರ್ಕೋ ರುಬಿಯೋ ಅವರು ಪಾಕ್ ನಡೆಸುತ್ತಿರುವ ಇಬ್ಬಗೆ ನೀತಿ ವಿರುದ್ಧ ಅಮೆರಿಕಾದ ಹಲವಾರು ಸಂಸದರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದರು.

ಶೀಘ್ರ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಭಾರತ ಒಂದು ಉತ್ತಮ ಘೋಷಣೆ ಮಾಡಲಿದೆ ಎಂಬ ವಿಶ್ವಾಸ ನಮಗಿದೆ. ಒಂದು ವೇಳೆ ಅಮೆರಿಕಾ ಪಾಕ್ ಪರ ನಿಲುವು ತಳೆದರೆ ಅದು ಮಾರಕವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Facebook Comments