ವಿಧಾನಸಭೆ ನಿಯಮಾವಳಿಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡಿ ವರದಿ ನೀಡಲುಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳನ್ನು ಸಮಗ್ರವಾಗಿ ಪರಿಶೀಲಿಸಿ ತಿದ್ದುಪಡಿ ಮಾಡಿ ವರದಿ ನೀಡಲು ನಿಯಮಾವಳಿ ಸಮಿತಿಯನ್ನು ರಚಿಸಲಾಗಿದೆ.  ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ 9 ಮಂದಿ ಸದಸ್ಯರ ನ್ನೊಳಗೊಂಡ ನಿಯಮಾವಳಿ ಸಮಿತಿಯನ್ನು ರಚಿಸ ಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮ 368ರ ಮೇರೆಗೆ ಹಾಲಿ ಇರುವ ನಿಯಮಾವಳಿಗಳನ್ನು ಸಮಗ್ರವಾಗಿ ಪರಿಶೀಲಿಸಿ ತಿದ್ದುಪಡಿ ಮಾಡುವುದಕ್ಕೆ ಸಂಬಂಧಿಸಿದಂತೆ ವರದಿಯನ್ನು ನೀಡಲು ವಿಧಾನಸಭಾಧ್ಯಕ್ಷರು ನಿಯಮಾವಳಿ ಸಮಿತಿಯನ್ನು ರಚಿಸಿದ್ದಾರೆ.

ಸಮಿತಿಯಲ್ಲಿ ವಿಧಾನಸಭೆ ಉಪಾಧ್ಯಕ್ಷ ರಾದ ಆನಂದ್ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ್ ಮಾಮನಿ, ಕಾನೂನು ಸಚಿವ ಜೆ.ಸಿ.ಮಾಧು ಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್, ಸರ್ಕಾರಿ ಮುಖ್ಯಸಚೇತಕ ವಿ.ಸುನೀಲ್‍ಕುಮಾರ್, ವಿಧಾನಸಭೆ ಸದಸ್ಯರಾದ ಕೆ.ಜಿ.ಬೋಪಯ್ಯ, ಕೆ.ಆರ್.ರಮೇಶ್‍ಕುಮಾರ್, ಕೃಷ್ಣಭೈರೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಅವರು ಸದಸ್ಯರಾಗಿದ್ದಾರೆ.

Facebook Comments