ಜೆಡಿಎಸ್ ಮನವಿಗೆ ಸ್ಪೀಕರ್ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15-ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ರಾಜ್ಯ ಸಕ್ರಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಲು ಜೆಡಿಎಸ್ ಶಾಸಕರು ನೀಡಿದ್ದ ನಿಲುವಳಿ ಸೂಚನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69ಕ್ಕೆ ಬದಲಾಯಿಸಿ ನಾಳೆ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.

ಪ್ರಶ್ನೋತ್ತರ ವೇಳೆ ಜೆಡಿಎಸ್‍ನ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ ಮತ್ತಿತರು ವಿಷಯ ಪ್ರಸ್ತಾಪಿಸಲು ಮುಂದಾದಾಗ, ನೀವು ನೀಡಿರುವ ನಿಲುವಳಿ ಸೂಚನೆ 2 ಬಾರಿ ಚರ್ಚೆಯಾಗಿದೆ. ಈ ವಿಚಾರವನ್ನು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಲು ಅವಕಾಶವಿದೆ. ಹೀಗಾಗಿ ನಿಲುವಳಿಗೆ ಸೂಚನೆಗೆ ಬದಲಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಜೆಡಿಎಸ್ ಸದಸ್ಯರು ನಿಲುವಳಿ ಸೂಚನೆ ನೀಡಿರುವ ವಿಚಾರ ತಾಂತ್ರಿಕವಾಗಿ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಈ ವಿಚಾರಕ್ಕೆ ಉತ್ತರಿಸಲು ಸರ್ಕಾರ ಸಿದ್ದವಿದೆ. ನಿಯಮ 69ಕ್ಕೆ ವರ್ಗಾಯಿಸುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಜೆಡಿಎಸ್ ಸದಸ್ಯರು ಚರ್ಚೆಗೆ ಸಮಯ ನಿಗದಿಪಡಿಸುವಂತೆ ಎದ್ದು ನಿಂತು ಆಗ್ರಹಿಸಿದಾಗ ಅಸಮಾಧಾನಗೊಂಡ ಸಭಾಧ್ಯಕ್ಷರು ನೀವು ಮೊದಲ ಬಾರಿಗೆ ಗೆದ್ದು ಬಂದವರಲ್ಲಿ ಸದನ ನಡೆಯುತ್ತಿರುವುದು ಮೊದಲ ವರ್ಷದಲ್ಲಿ ಎಲ್ಲರೂ ಎದ್ದು ನಿಂತರೆ ಹೇಗೆ ಎಂದು ಪ್ರಶ್ನಿಸಿದರು.

Facebook Comments