ವಿಧಾನಸಭೆ ಅಧ್ಯಕ್ಷ ಕಾಗೇರಿ ರಾಜ್ಯಪಾಲರನ್ನು ಭೇಟಿಯಾಗಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.26- ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಇಂದು ಸೌಜನ್ಯದ ಭೇಟಿ ಮಾಡಿದ್ದರು. ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲಾಗದ ಕಾರಣ ಇಂದು ರಾಜ್ಯಪಾಲರನ್ನು ವಿಧಾನಸಭಾಧ್ಯಕ್ಷರು ಭೇಟಿಯಾಗಿದ್ದರು ಎಂದು ಸಭಾಧ್ಯಕ್ಷರ ಕಾರ್ಯಾಲಯದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ಸಭಾಧ್ಯಕ್ಷರು ರಾಜ್ಯಪಾಲರನ್ನು ಭೇಟಿಯಾಗಿರುವುದಕ್ಕೂ ಸಂಬಂಧವಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ನೂತನ ರಾಜ್ಯಪಾಲರನ್ನು ಈತನಕ ಸಭಾಧ್ಯಕ್ಷರು ಭೇಟಿ ಮಾಡಿರಲಿಲ್ಲ. ಸೌಜನ್ಯದ ಭೇಟಿ ಮಾಡಿದ್ದು , ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಮೂಲಗಳು ತಿಳಿಸಿವೆ.

Facebook Comments