ಜು.27ರ ವರೆಗೆ ಕಲಬುರಗಿ ಲಾಕ್‍ಡೌನ್

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಜು.20- ಕೊರೊನಾ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಜುಲೈ 27ರ ವರೆಗೆ ಲಾಕ್‍ಡೌನ್ ಮುಂದುವರಿಸಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೇ ಹೆಚ್ಚುತ್ತಿದೆ. ಈವರೆಗೆ 2743 ಸೋಂಕಿತರು ಪತ್ತೆಯಾಗಿದ್ದು, 46 ಮಂದಿ ಸಾವನ್ನಪ್ಪಿದ್ದಾರೆ. ಹೆಚ್ಚಿನ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಜನತೆ ಜಾಗೃತರಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ.

ಬರುವ ಜು.27ರ ವರೆಗೆ ಎಲ್ಲ ವಾಣಿಜ್ಯ-ವಹಿವಾಟು, ವಾಹನ ಸಂಚಾರ ಬಂದ್ ಆಗಲಿದ್ದು, ಜನರು ಅನಗತ್ಯ ಓಡಾಟ ಮಾಡಬಾರದು, ಅಗತ್ಯ ವಸ್ತುಗಳಿಗೆ ನಿರ್ದಿಷ್ಟ ವೇಳೆಗೆ ಸಾಗಾಟ ಮಾಡುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin