ಸಂಭ್ರಮದಲ್ಲಿ `ಕಾಳಿದಾಸ’

ಈ ಸುದ್ದಿಯನ್ನು ಶೇರ್ ಮಾಡಿ

ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಕಂಡಿದೆ. ನಿರ್ದೇಶಕ ಕವಿರಾಜ್, ನಾಯಕ ಜಗ್ಗೇಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಖುಷಿಯಾಗಿದೆ. ಆ ಖುಷಿಯನ್ನು ಮಾದ್ಯಮದೊಂದಿಗೆ ಹಂಚಿ ಕೊಳ್ಳಲೆಂದೇ ಮೊನ್ನೆ ಪ್ರೆಸ್ ಮೀಟ್ ಕರೆಯಲಾಗಿತ್ತು. ಕವಿರಾಜ್, ನಾಯಕಿ ಮೇಘನಾ ಗಾಂವಕರ್, ವಿತರಕ ದೀಪಕ್ ಹಾಜರಿದ್ದು ಚಿತ್ರ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಹೇಳಿದರು.

ಆಗ ಮಾತನಾಡಿದ ಜಗ್ಗೇಶ್ ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕ ಎನಿಸಿದೆ. ಸಿನಿಮಾ ರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದಾ. ಆದರೆ, ಕವಿರಾಜ ನೀವು ಸುಮ್ಮನೆ ನಿಲ್ಲಬಾರದು ಸರ್ ಅಂತ ನನ್ನನ್ನು ಕರೆದು, ಪಾಠ ಮಾಡೋಕೆ ಹೇಳಿದರು.  ಎಲ್ಲರೂ ಪಾಠ ಕೇಳಿ ಚಪ್ಪಾಳೆ ತಟ್ಟಿದ್ದಾರೆ. ನನಗೆ ಇದಕ್ಕಿಂತ ಖುಷಿ ಬೇರೊಂದಿಲ್ಲ , ನಾನು ಇನ್ಮುಂದೆ ಒಳ್ಳೆಯ ಕಥೆ, ಪಾತ್ರ ಇದ್ದರೆ ಮಾತ್ರ ಮಾಡೋಣ ಅಂತ ನಿರ್ಧರಿಸಿದ್ದಾ.

ಕವಿರಾಜ್ ಈ ಕಥೆ ತಗೊಂಡು ಬಂದು ನೀವು ಈ ಪಾತ್ರ ಮಾಡಲೇಬೇಕು ಅಂದರು. ಅವರು ಹೇಳಿದಂತೆಯೇ ಚಿತ್ರ ಮಾಡಿದರು. ಚಿತ್ರ ಎಲ್ಲರಿಗೂ ಇಷ್ಟವಾಗಿದೆ, ಗೆಲುವು ತಂದುಕೊಟ್ಟಿದೆ. ಒಳ್ಳೆಯ ಚಿತ್ರ ಮಾಡಿದರೆ, ಜನ ಖಂಡಿತ ನೋಡುತ್ತಾರೆ ಎಂದು ಸಾಬೀತಾಗಿದೆ, ನಮ್ಮನ್ನು ಜನ ದಡ ಸೇರಿಸಿದ್ದಾರೆ.

ಇಲ್ಲಷ್ಟೇ ಅಲ್ಲ, ಈಗ ಸಾಗರದಾಚೆಯೂ ಮೇಷ್ಟ್ರು ಪಾಠ ಮಾಡೋಕೆ ಹೋಗುತ್ತಿದ್ದಾರೆ ಎನ್ನುವುದು ಖುಷಿಯ ಸಂಗತಿ. ಬಿಡುಗಡೆ ಸಮಯದಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಬಿಡುಗಡೆಯಾದರೂ ಅದೆಲ್ಲವನ್ನೂ ಎದುರಿಸಿ ಚಿತ್ರ ಗೆದ್ದಿದೆ ಅಂದರೆ, ಅದಕ್ಕೆ ಕಾರಣ ಜನ ನಮ್ಮ ಪ್ರಯತ್ನವನ್ನು ಮೆಚ್ಚಿದ್ದಾರೆ ಎಂಬುದು. ಕೆಲವು ಕಡೆ ಜನರ ಬೇಡಿಕೆ ಮೇರೆಗೆ ಚಿತ್ರ ಬಿಡುಗಡೆಯಾಗಿದೆ. ಅಲ್ಲದೆ ಚಿತ್ರಕ್ಕೆ ಒಂದು ಶೋ ಕೊಡ್ತೀವಿ ಅಂತ ಹೇಳಿದವರು, ಈಗ ಅವರೇ ಕರೆದು ನಾಲ್ಕು ಶೋ ಕೊಡುತ್ತಿದ್ದಾರೆ. ಅದೇಕೋ, ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ.

ಕಾರಣ ಗೊತ್ತಿಲ್ಲ. ನಿಜಕ್ಕೂ ಅದೊಂದು ದುರಂತ. ಒಳ್ಳೆಯ ಚಿತ್ರ ಬಂದರೆ, ಖಂಡಿತ ಜನ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ನನ್ನದು. ಈ ಚಿತ್ರಕ್ಕೆ ಎಲ್ಲೇಡೆಯಿಂದಲೂ ಮೆಚ್ಚುಗೆ ಬಂದಿದೆ.  ನನ್ನ ಸಿನಿಜರ್ನಿಯಲ್ಲಿ ಒಳ್ಳೆಯ ಚಿತ್ರಗಳ ಸಾಲಿಗೆ ಈ ಚಿತ್ರವೂ ಸೇರಿದೆ. ಇಷ್ಟರ¯್ಲ ಮುಖ್ಯಮಂತ್ರಿಗಳಿಗೆ ಸಿನಿಮಾ ತೋರಿಸುತ್ತೇನೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಖಂಡಿತವಾಗಿಯೂ ಸಿನಿಮಾ ತೋರಿಸುತ್ತೇನೆ. ಸರ್ಕಾರದ ಶಿಕ್ಷಣ ಸಚಿವರು ಕೂಡ ಸಿನಿಮಾ ನೋಡಲಿದ್ದಾರೆ ಎಂದು ಹೇಳಿದರು.

Facebook Comments