67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಮಲ್‍ಹಾಸನ್‍

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ನ.7- ಭಾರತ ಚಿತ್ರರಂಗದ ಶ್ರೇಷ್ಠ ನಟ ಹಾಗೂ ರಾಜಕಾರಣಿ ಕಮಲ್‍ಹಾಸನ್ ಅವರು ತಮ್ಮ 67 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ತಮಿಳು, ತೆಲುಗು ಚಿತ್ರರಂಗದ ಹಲವು ಗಣ್ಯರು ಹಾಗೂ ರಾಜಕೀಯ ಮುಖಂಡರು ಜನ್ಮ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ಕಮಲಹಾಸನ್ ಅವರ ಹುಟ್ಟುಹಬ್ಬದ ಅಂಗವಾಗಿ ನಿರ್ದೇಶಕ ಕನಗರಾಜ್ ನಿರ್ದೇಶನದಲ್ಲಿ ಕಮಲ್ ನಟಿಸಿರುವ ವಿಕ್ರಮ್ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಕಮಲ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕ್ರೇಜ್ ಹುಟ್ಟಿಸಿದ್ದಾರೆ.

ತೆಲುಗು ಚಿತ್ರರಂಗದ ಸ್ಟಾರ್ ಕಲಾವಿದರಾದ ಮಹೇಶ್‍ಬಾಬು, ರಾಣದಗ್ಗುಬಟಿ, ತಮಿಳು ಚಿತ್ರರಂಗದ ಆರ್ಯ, ಖುಷ್ಬೂ , ರಾಕಾ ಶರತ್‍ಕುಮಾರ್, ಸ್ಯಾಂಡಲ್‍ವುಡ್ ನಟ ರಮೇಶ್ ಅರವಿಂದ್, ಮುಂತಾದವರು ಕಮಲ್‍ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಕಮಲ್‍ಹಾಸನ್ ಅವರು ಶಂಕರಂ ನಿರ್ದೇಶನದ ಇಂಡಿಯನ್ 2 ಚಿತ್ರದಲ್ಲೂ ನಟಿಸುತ್ತಿದ್ದಾರೆ.

Facebook Comments