ಸಂಚಾರ ಸಂಪರ್ಕ ದಿನದಲ್ಲಿ ಪೊಲೀಸ್ ಆಯುಕ್ತ ಕಮಲ್‍ಪಂತ್‌ಗೆ ದೂರುಗಳ ಸುರಿಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಮಹದೇವಪುರ,ಡಿ.12- ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಸಂಚಾರ ಸಂಪರ್ಕ ದಿನದ ಅಂಗವಾಗಿ ಇಂದು ವೈಟ್‍ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಕಮಲ್‍ಪಂತ್ ಅವರು ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಆಯುಕ್ತರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.

ಸಂಚಾರ ದಟ್ಟಣೆ, ರಸ್ತೆ ಬದಿಯಲ್ಲಿ ಡಸ್ಟ್, ಪಾಟ್ ಹೋಲ್ಸ , ವಾಟರ್ ಟ್ಯಾಂಕರ್ ಗಳನ್ನು ಅಪ್ರಾಪ್ತರು ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ ಎಂಬ ಬಗ್ಗೆ ದೂರುಗಳು ಕೇಳಿ ಬಂದವು. ಜೊತೆಗೆ ಅಕ್ರಮ ಕಸಾಯಿ ಖಾನೆಗಳು, ಅನಧಿಕೃತ ಫ್ಲಕ್ಸ್‍ಗಳು, ಅನಧಿಕೃತ ಕೇಬಲ್‍ಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಮತ್ತು ಆಂಬ್ಯುಲೆನ್ಸ್‍ಗಳಿಗೆ ಮುಕ್ತ ಅವಕಾಶ ಕಲ್ಪಿಸಿ, ಸಿಗ್ನಲ್‍ಗಳ ಸಮಯ ಕಾಣುವಂತೆ ಮಾಡಿದರೆ ಸೂಕ್ತ. ಪಾರ್ಕಿಂಗ್ ಬಗ್ಗೆ ಸೂಕ್ತ ಮಾರ್ಗ ದಶರ್ನ ನೀಡಿ ಎಂದು ಸಾರ್ವಜನಿಕರು ಆಯುಕ್ತರ ಗಮನ ಸೆಳೆದರು.

ಟೋಯಿಂಗ್ ಮಾಡುವ ಸಿಬ್ಬಂದಿಗಳು ರೌಡಿಗಳಂತೆ ವರ್ತನೆ ಮಾಡುತ್ತಾರೆ. ವರ್ತೂರು, ಗುಂಜೂರು , ವೈಟ್ ಫೀಲ್ಡï ಭಾಗದಲ್ಲಿ ಫುಟ್ ಪಾತ್ ಒತ್ತವರಿ, ಬಿಎಂಟಿಸಿ ಬಸ್‍ಗಳ ಹಿಂದೆ ಅಳವಡಿಸುವ ಜಾಹಿರಾತಿನಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಅಲವತ್ತುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಆದಷ್ಟು ಬೇಗ ಸಿಗ್ನಲ್ ಟೈಮರ್ ಅಳವಡಿಸುತ್ತೇವೆ, ಟೋಯಿಂಗ್ ಸಿಬ್ಬಂದಿ ಬಗ್ಗೆ ಯಾವುದೇ ದೂರಿಗಳಿದ್ದರೆ, ಹೆಚ್ಚಿನ ಶುಲ್ಕ ಪಡೆದರೆ ಅವರ ಬಗ್ಗೆ ಮಾಹಿತಿ ಕೊಡಿ. ಅವರ ಗುತ್ತಿಗೆ ವಜಾ ಗೊಳಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ರಸ್ತೆ ಅಗಲೀಕರಣ, ಫುಟ್ ಪಾತ್ ತೆರವು ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸ ಲಾಗುತ್ತೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದರು.
ವರ್ತೂರು ಭಾಗದ ನಿವಾಸಿಗಳು ಮಾತನಾಡಿ, ಗುಂಜೂರು ಭಾಗದಲ್ಲಿ ರಸ್ತೆಗಳು ಬಹಳ ಸಣ್ಣದಾಗಿದ್ದು, ಶಾಲೆಗಳು ಸಹಾ ಹೆಚ್ಚಿದ್ದು ನೂರಾರು ಶಾಲೆ ಬಸ್ಸುಗಳು ಸಂಚರಿ ಸಲು ಬಹಳ ಸಮಸ್ಯೆ ಇದೇ.

ಮತ್ತೆ ಪಾದಚಾರಿ ಮಾರ್ಗಗಳಲ್ಲಿ ವಾಹನಗಳು ಸಂಚರಿಸು ವುದರಿಂದ ಪಾದಚಾರಿ ಗಳಿಗೆ ತೊಂದರೆ ಯಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ದೂರು ನೀಡಿದರು.
ಈ ನಡುವೆ ಎಲ್ಲೆಂದರಲ್ಲಿ ಸಂಚಾರಿ ಪೊಲೀಸರು ಮನ ಬಂದಂತೆ ವಾಹನಗಳನ್ನು ನಿಲ್ಲಿಸಿ ದಂಡ ವಿಧಿಸುತ್ತಿದ್ದಾರೆ. ಹೆಲ್ಮೆಟ್, ಮಾಸ್ಕ್ , ಪರವಾನಗಿ ಇದ್ದರೂ ಸಹ ಇತರೆ ಕಾರಣಗಳನ್ನು ನೀಡಿ ಪ್ರಶ್ನಿಸುತ್ತಾರೆ.ಇದನ್ನು ಸರಿಪಡಿಸಿ ಎಂದು ಸಾರ್ವಜನಿಕರು ಮನವಿ ಮಾಡಿದರು.

ಇದೇ ವೇಳೆ ಸಾರ್ವಜನಿಕರ ಅಹವಾಲು ಗಳನ್ನು ಸ್ವೀಕರಿಸಲಾಯಿತು. ಸಭೆಯಲ್ಲಿ ಡಿಸಿಪಿಗಳಾದ ದೇವರಾಜ, ನಾರಾಯಣ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments