ಡ್ರಗ್ಸ್ ವಿಚಾರ ಕುರಿತು ಕಮಲ್ ಪಂತ್ ಸುದ್ದಿಗೋಷ್ಠಿ, ಇಲ್ಲಿದೆ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಸೆ.4 : ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಬಳಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಲ್ ಪಂತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರವಿ ಮತ್ತು ರಾಹುಲ್ ಎಂಬುವರನ್ನು ಬಂಧಿಸಲಾಗಿದ್ದು ಅವರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ನಟಿ ರಾಗಿಣಿ ಸಂಬಂಧಿಸಿದಂತೆ ಸಿಸಿಬಿಯವರು ಇಂದು ಬೆಳಿಗ್ಗೆ ಅವರ ಮನೆಯಲ್ಲಿ ತಪಾಸಣೆ ಕೈಗೊಂಡಿದ್ದಾರೆ ಅವರನ್ನು ಸಿಸಿಬಿ ಕಚೇರಿ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಈವರೆಗೆ ಅವರನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ನಮ್ಮ ಅಧಿಕಾರಿಗಳು ತನಿಖೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಈ ಹಂತದಲ್ಲಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಇಂದ್ರಜಿತ್ ಲಂಕೇಶ್ ಅವರು ನೀಡಿರುವ ಮಾಹಿತಿ ಮತ್ತು ತಿಳಿಸಿರುವ ಹೆಸರುಗಳನ್ನೂ ಕೂಡ ಪರಿಶೀಲನೆ ಮಾಡಿ ಸಂಬಂಧಪಟ್ಟವನ್ನು ಕರೆಸಿ ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣದ ಸೂಕ್ಶ್ಮತೆಯ ದೃಷ್ಟಿಯಿಂದ ನಮಗಿನ್ನೂ ಸಮಯ ಬೇಕಾಗಿದ್ದು, ಮುಂದೆ ಎಲ್ಲವನ್ನು ಮಾದ್ಯಮಕ್ಕೆ ತಿಳುಸುತ್ತೇವೆ ಆದರೆ, ಈಗಲೇ ಏನನ್ನೂ ತಿಳಿಸಲು ಸಾಧ್ಯವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿಲಿದ್ದಾರೆ.

Facebook Comments

Sri Raghav

Admin