ನಾಯಕತ್ವ ಹುಟ್ಟಿನಿಂದಲೇ ಆರಂಭಗೊಳ್ಳುತ್ತದೆ, ಮುದುಕರಾಗುವವರೆಗೂ ಕಾಯಬೇಕಿಲ್ಲ: ಕಮಲಾ ಹ್ಯಾರಿಸ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.31- ಸಮುದಾಯದ ನಾಯಕತ್ವ ವಹಿಸಿಕೊಂಡು ನಿಮ್ಮ ಕಾಲ ಮೇಲೆ ನೀವು ನಿಲ್ಲಬೇಕು ಎಂದು ದಕ್ಷಿಣ ಏಷ್ಯಾದ ಮಹಿಳೆಯರಿಗೆ ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಕರೆ ನೀಡಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಭಾರತೀಯ ಮೂಲದ ಕಪ್ಪು ಮಹಿಳೆಯೊಬ್ಬರು ಡೆಮಾಕ್ರೆಟಿಕ್ ಪಕ್ಷದಿಂದ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಮಲಾ ಹ್ಯಾರಿಸ್ ಅವರು ಭಾರತೀಯರ ಅದರಲ್ಲೂ ದಕ್ಷಿಣ ಏಷ್ಯಾದ ಮತಗಳ ಮೇಲೆ ಕಣ್ಣಿಟ್ಟಿದ್ದು ಆ ಭಾಗದ ಮಹಿಳೆಯರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ದಕ್ಷಿಣ ಏಷ್ಯಾದ ಮಹಿಳೆಯರು ಆಯಾ ಸಮುದಾಯದ ನಾಯಕತ್ವ ವಹಿಸಿಕೊಳ್ಳಬೇಕು. ಇದರ ಜತೆಗೆ ತಾವೇ ಒಂದು ಉದ್ದಿಮೆ ತೆರೆದು ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಬೇಕೆಂದು ಕರೆ ನೀಡಿದ್ದಾರೆ.

ನನಗೆ ಗೊತ್ತು ನೀವೆಲ್ಲಾ ನನ್ನ ಮಾತನ್ನು ಕೇಳುತ್ತಿದ್ದೀರಾ. ನಾಯಕತ್ವ ಎನ್ನುವುದು ಹುಟ್ಟಿನಿಂದಲೇ ಆರಂಭಗೊಳ್ಳುತ್ತದೆ. ನೀವು ನಾಯಕರಾಗಲು ವಯಸ್ಕರಾಗುವ ತನಕ ಇಲ್ಲವೇ ಮುದುಕರಾಗುವವರೆಗೂ ಕಾಯಬೇಕಿಲ್ಲ. ಈಗಿನಿಂದಲೇ ನಾಯಕರಾಗಿ ಎಂದು ಹ್ಯಾರಿಸ್ ಕರೆ ನೀಡಿದರು.

ನೀವು ನಿಮ್ಮ ಸಮುದಾಯದ ನಾಯಕತ್ವ ವಹಿಸಿಕೊಳ್ಳಿ. ಏನು ಮಾಡಬೇಕೆಂದಿದ್ದೀರೋ ಅದನ್ನು ನಿಸ್ಸಂಕೋಚವಾಗಿ ಮಾಡಿ ಎಂದು ಅವರು ದಕ್ಷಿಣ ಏಷ್ಯಾದ ಮಹಿಳೆಯರನ್ನು ಉದ್ದೇಶಿಸಿ ಮಾಡಿರುವ ಆಡಿಯೋ ಮೆಸೇಜ್ ವೈರಲ್ ಆಗಿದೆ.

Facebook Comments