ಭಾರತ ಸಂಜಾತೆ ಕಮಲಾ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷೆ ಅಭ್ಯರ್ಥಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.12-ಕೊರೊನಾ ಹಾವಳಿ ನಡುವೆಯೂ ಅಮೆರಿಕ ಅಧ್ಯಕ್ಷೀಯ ಚುನಾವಣೆ ರಂಗೇರತೊಡಗಿದ್ದು, ಭಾರತೀಯ ಮೂಲದ ಸಂಜಾತೆ, ಸಂಸದೆ ಮತ್ತು ಪ್ರಭಾವಿ ಮಹಿಳೆ ಕಮಲಾ ದೇವಿ ಹ್ಯಾರಿಸ್ ಡೆಮೊಕ್ರಾಟಿಕ್ ಪಕ್ಷದಿಂದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್‍ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ನಾಯಕ ಮತ್ತು ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮೊಕ್ರಾಟಿಕ್ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಉಪಾಧ್ಯಕ್ಷ ಜೋ ಬಿಡೆನ್, ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಅಧ್ಯಕ್ಷ ಟ್ರಂಪ್ ಚುನಾವಣೆಯಲ್ಲಿ ಮಣಿಸಲು ಕಾರ್ಯತಂತ್ರ ರೂಪಿಸಿರುವ ಬಿಡೆನ್ ಕಪ್ಪು ವರ್ಣೀಯರ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಎಂಬುದು ಮನವರಿಕೆಯಾಗಿ ಕಮಲಾ ದೇವಿ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಅಭ್ಯಥೀಯನ್ನಾಗಿ ಆರಿಸಿದ್ದಾರೆ.

ಖ್ಯಾತ ವಕೀಲರು ಮತ್ತು ಕ್ಯಾಲಿಫೋರ್ನಿಯಾ ಸೆನೆಟರ್ ಆಗಿರುವ 55 ವರ್ಷದ ಕಮಲಾ ಹ್ಯಾರಿಸ್ ಅವರನ್ನು ವೈಸ್‍ಪ್ರೆಸಿಡೆಂಟ್ ಕ್ಯಾಂಡಿದೇಟ್ ಆಗಿ ನೇಮಕ ಮಾಡುವ ಮೂಲಕ ಕಪ್ಪು ವರ್ಣೀಯರ ಮತಗಳತ್ತ ಬಿಡೆನ್ ಗಮನ ಕೇಂದ್ರೀಕರಿಸಿದ್ದಾರೆ.

ಪ್ರಮುಖ ಹುದ್ದೆಗೆ ಸ್ರ್ಪಸಲು ಡೆಮೊಕ್ರಾಟಿಕ್ ಪಕ್ಷದಿಂದ ಕಪ್ಪು ಮಹಿಳೆಯನ್ನು ಆಯ್ಕೆ ಮಾಡುವ ಮೂಲಕ ಜೋ ಬಿಡೆನ್ ಹೊಸ ಇತಿಹಾಸ ಸೃಷ್ಟಿಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರ ತಂದೆ ಆಫ್ರಿಕಾದವರು. ತಾಯಿ ಭಾರತೀಯ ಮೂಲದವರು. ಕ್ಯಾಲಿಫೋರ್ನಿಯಾದ ಅತ್ಯಂತ ಪ್ರಭಾವಿ ರಾಜಕೀಯ ನಾಯಕಿಯಾಗಿರುವ ಭಾರತೀಯ ಮೂಲಕ ಕಮಲಾ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂಬುದು ಮಾಜಿ ಅಧ್ಯಕ್ಷ ಬರಾಜ್ ಒಬಾಮಾ ಅವರ ಬಯಕೆಯಾಗಿತ್ತು.

ಈಗ ಕಮಲಾ ಅವರು ಚುನಾವಣೆಯಲ್ಲಿ ರ್ಸಸುತ್ತಿರುವುದು ಭಾರತೀಯ ಮತ್ತು ಆಫ್ರಿಕಾ ಮೂಲದ ಜನರಲ್ಲಿ ಸಂತಸ ಮೂಡಿಸಿದೆ.

Facebook Comments

Sri Raghav

Admin