ಗುರುಕೃಪೆಯಿಂದಲೇ ನಾನು ಇಷ್ಟೊಂದು ಸಾಧನೆ ಸಾಧ್ಯ : ಕಾಮೆಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಜು.3- ರಷಸಿದ್ದೇಶ್ವರ ಮಠದ ಗುರುಕೃಪೆಯಿಂದಲೇ ನಾನು ಇಷ್ಟೊಂದು ಸಾಧನೆಗೆಯ್ಯಲು ಸಾಧ್ಯವಾಗಿದೆ ಎಂದು ದಾಸನದೊಡ್ಡಿ ಗ್ರಾಮದ ಬಸವಶ್ರೀ ಪ್ರಶಸ್ತಿ ಪುರಸ್ಕøತ ಆದುನಿಕ ಭಗಿರಥ , 17 ಚೆಕ್ ಡ್ಯಾಂ ನಿರ್ಮಾತೃ ಕಲ್ಮನೆ ಕಾಮೆಗೌಡರು ಇಂದಿಲ್ಲಿ ಹೇಳಿದರು.

ತಾಲೂಕಿನ ಕುಂದೂರು ಬೆಟ್ಟದ ರಷಸಿದ್ದೇಶ್ವರ ಮಠದಲ್ಲಿ ಆಯೋಜಿಸಿದ್ದ ಕರೋನ ತಡೆಗಟ್ಟಲು ನಮ್ಮ ಆರೋಗ್ಯ-ನಮ್ಮ ರಕ್ಷಣೆ ಎಂಬ ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಪ್ರದಾನಿ ಮೋದಿಯವರ ಪ್ರಶಂಸೆಗೆ ಪಾತ್ರರಾದ ನಂತರ ಮೊದಲ ಬಾರಿಗೆ ಶ್ರೀಮಠದ ಅಭಿನಂಧನೆ ಸ್ವೀಕರಿಸಿ ಅವರು ಮಾತನಾಡಿದರು.

ಗುರುಕೃಪೆಯಿಲ್ಲದಿದ್ದರೆ ನಾನು ಇಷ್ಟೊಂದು ಹೆಸರು ಮಾಡಲು ಸಾದ್ಯವಾಗುತ್ತಿರಲಿಲ್ಲ. ಶ್ರೀಮಠ ಪ್ರಫ್ರಥಮವಾಗಿ ಅಭಿನಂಧನೆ ಏನೆಂದು ತಿಳಿಯದ ನನಗೆ ಈ ಬಡ ವೃದ್ದನನ್ನು ಕರೆದು ಸನ್ಮಾನಿಸಿ ಅಭಿನಂಧಿಸಿ ಗೌರವಿಸಿದ್ದು ನನಗೆ ಶ್ರೀರಕ್ಷೆಯಾಗಿದೆ ಎಂದರು.

ಪ್ರಧÁನಿ ಮೋದಿ ನನ್ನಂತಹ ಬಡವೃದ್ದನನ್ನು ಅಭಿನಂಧಿಸಿರುವುದು ನನ್ನ ಪುಣ್ಯ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಕೆರೆಯ ನಿರ್ವಹಣೆಗೆ 25ಲಕ್ಷ ಅರ್ಥಿಕ ಸಹಾಯ, ಮನೆ ಕಟ್ಟಿಕೊಡುತ್ತೆನೆ. ಹಾಗೂ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ,ಬಸವಶ್ರೀ ಪ್ರಶಸ್ತಿ ಪುರಸ್ಕøತ ಕಲ್ಮನೆ ಕಾಮೆಗೌಡರನ್ನು ಅಭಿನಂಧಿಸಿ ಗೌರವಿಸಲಾಯಿತು. ಶ್ರೀಮಠದ ಭಕ್ತರಾದ ಗೌಡರ ಗುರುಸ್ವಾಮಿ,ಪಟೇಲ್ ವೃಷಬೇಂದ್ರಪ್ಪ, ಪ್ರಕಾಶ್, ಬಬ್ರುವಾಹನ, ಮಾ.ಎಂ.ಶಿವಕುಮಾರ್, ಪುಟ್ಟಬುದ್ದಿ ಸೇರಿದಂತೆ ಹಲವು ಭಕ್ತರು ಉಪಸ್ಥಿತರಿದ್ದರು.

Facebook Comments