ಐತಿಹಾಸಿಕ ಕೆಂಪಯ್ಯನ ಕಟ್ಟೆ ಅಭಿವೃದ್ಧಿಗೆ ಕಾಯಕಲ್ಪ, ವಿಶೇಷಚೇತನರ ಸಾಹಸ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಸೆ.14- ನೂರಾರು ವರ್ಷಗಳ ಇತಿಹಾಸ ಒಳಗೊಂಡಿರುವ ಮಳವಳ್ಳಿ ಪಟ್ಟಣದ ಕೆಂಪಯ್ಯನ ಕಟ್ಟೆ ಅಭಿವೃದ್ಧಿಗೆ ಜನಪ್ರತಿನಿಧಿಗಳು ನೀಡಿದ್ದ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ವಿಕಲ ಚೇತನರೊಬ್ಬರು ದಾನಿಗಳ ಸಹಕಾರದಿಂದ ಕಟ್ಟೆಯ ಕಾಯಕಲ್ಪಕ್ಕೆ ಶ್ರಮಿಸುತ್ತಿರುವುದು ಪ್ರಸಂಶೆಗೆ ಪಾತ್ರವಾಗಿದೆ.

ದೇಹದ ಅಂಗಾಂಗಗಳೆಲ್ಲ ಸದೃಢವಾಗಿರುವ ಹಾಗೂ ಹಣ ಅಧಿಕಾರ ಹೊಂದಿರುವವವರು ಜನರಿಗೆ ಸಣ್ಣಪುಟ್ಟ ಉಡುಗೊರೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳವರು ಅಧಿಕಾರವಿಲ್ಲದೆ ಅಥವಾ ಯಾವುದೇ ಫಲಾಪೇಕ್ಷೆ ಇಲ್ಲದೆ ಕಟ್ಟೆ ಅಭಿವೃದ್ಧಿಗೆ ಪೇಟೆ ಬೀದಿಯ ನಿವಾಸಿ ಚಿಕ್ಕಮರೀಗೌಡ ಎಂಬ ವಿಕಲಚೇತನರೊಬ್ಬರು ಉಳ್ಳವರ ಮನವೊಲಿಸಿ ಸಹಾಯ ಪಡೆದು ಗಿಡ-ಗಂಟೆಗಳಿಂದ ಮುಚ್ಚಿ ಹೋಗುತ್ತಿದ್ದ ಶತಮಾನಗಳಷ್ಟು ಹಳೆಯ ಕಟ್ಟೆಯೊಂದರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಹುಟ್ಟಿನಿಂದ ಅಂಗವೈಫಲ್ಯ ಹಾಗೂ ಬಡತನದಲ್ಲೇ ಬದುಕು ಸಾಗಿಸುತ್ತಿದ್ದರೂ ಜನರಿಗೆ ಒಳಿತಾ ಗುವ ಕೆಲಸ ಮಾಡುವ ವಿಷಯದಲ್ಲಿ ಮುಂಚೂಣಿಯಲ್ಲಿ ನಿಲ್ಲತ್ತಾರೆ.  ಸುಮಾರು 25 ವರ್ಷಗಳ ಹಿಂದೆ ಯುವಕರನ್ನು ಸಂಘಟಿಸಿ ಸರ್‍ಎಂವಿ ಅವರು ಸಂಘ ಕಟ್ಟಿಕೊಂಡು ಸಮಾಜಮುಖಿ ಕಾರ್ಯಕ್ಕಾಗಿ ಜೀವನ ಸವೆಸುತ್ತಿದ್ದಾರೆ.

ಕಳೆದ ವರ್ಷ ಉತ್ತಮ ಮಳೆಯಾದ ಸಂದರ್ಭದಲ್ಲಿ ಕಟ್ಟೆಯನ್ನು ಶಾಸಕ ಅನ್ನದಾನಿ ತುಂಬಿಸಿ ಬಾಗಿನ ಅರ್ಪಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಿ ಕಟ್ಟೆ ಸುತ್ತಲೂ ವಾಕಿಂಗ್ ಪಾರ್ಕ್ ಮಾಡುವ ಭರವಸೆ ನೀಡಿದ್ದರು.  ಆದರೆ, ಅದು ವರ್ಷಗಳ ಕಳೆದರೂ ಭರವಸೆಯಾಗೇ ಉಳಿದಿದೆ.

ಪಟ್ಟಣದ ಯುವಕರು ಮತ್ತು ಹಿರಿಯರು ಕಟ್ಟೆಯನ್ನು ತುಂಬಿಸಿ ಕಟ್ಟೆಯ ಸುತ್ತಮುತ್ತಲ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ. ಜತೆಗೆ ಪುರಸಭೆ ಸದಸ್ಯ ಜಯಸಿಂಹ, ಸತೀಶ್, ಲಿಂಗರಾಜು, ಪರಿಸರ ಪೇಮಿ ನಾಗರಾಜು ಸೇರಿಕೊಂಡು ಕಟ್ಟೆಗೆ ನೀರು ಬರುವ ನಾಲೆ ಕೆಲವು ಕಡೆ ಮುಚ್ಚಿ ಹೋಗಿದೆ.

ನಾಲೆಯನ್ನು ತೆಗೆದು ನೀರು ತುಂಬಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.ಕಟ್ಟೆ ಸುತ್ತಲೂ ಸರ್ ಎಂ.ವಿಶ್ವೇಶ್ವರಯ್ಯ ನವರ ಹುಟ್ಟುಹಬ್ಬ ದಿನದಂದು ಸಾವಿ ರಾರು ಗಿಡಗಳನ್ನು ನೆಡಲು ಸ್ವಚ್ಛಗೊಳಿಸಲಾಗುತ್ತದೆ.ವಿಕಲಚೇತನರಾಗಿದ್ದರೂ ಚಿಕ್ಕಮರೀಗೌಡ ಉತ್ಸಾಹ ಯುವಕರನ್ನು ನಾಚಿಸುತ್ತಿದೆ.

ಇವರ ಈ ಉತ್ತಮ ಕಾರ್ಯಕ್ಕೆ ನಾನೂ ಕೈಜೋಡಿಸಿ ಕಟ್ಟೆಯ ಸುತ್ತಲೂ ಗಿಡಗಳನ್ನು ನೆಟ್ಟು ಬೆಳೆಸುವ ಹೊಣೆ ತೆಗೆದುಕೊಳ್ಳವ ಮೂಲಕ ನಮ್ಮ ಹಳೆಯ ಸಂಸ್ಕøತಿಯನ್ನು ಮರು ಕಳಿಸಲು ಶ್ರಮಿಸುತ್ತೇನೆ ಎಂದು ಡಾ.ಸಾಲು ಮರದ ನಾಗರಾಜು ಹೇಳುತ್ತಾರೆ.

ಮನುಕುಲದ ಉಳಿವಿಗೆ ಜೀವ ಜಲವೇ ಆಧಾರವಾಗಿದ್ದು, ಇದನ್ನು ಸಂರಕ್ಷಿಸಲು ಕೆರೆ-ಕಟ್ಟೆ ಉಳಿಸಿಕೊಳ್ಳಬೇಕಾದ ಹೊಣೆ ಗಾರಿಕೆ ಜನಸಾಮನ್ಯರ ಮೇಲಿದೆ.  ಈ ನಿಟ್ಟಿನಲ್ಲಿ ಎಲ್ಲ ಸ್ನೇಹಿತರ ಸಹಕಾರದಿಂದ ನೂರಾರು ವರ್ಷಗಳ ಇತಿಹಾಸವಿರುವ ಕಟ್ಟೆ ಏರಿ ಸ್ವಚ್ಛಗೊಳಿಸುತ್ತಿದ್ದೇವೆ ಎನ್ನುತ್ತಾರೆ ಚಿಕ್ಕಿ ಮರೀಗೌಡ.

Facebook Comments