ಕಾಡು ಪ್ರಾಣಿ ಬೇಟೆಗಾರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

kanakapurಕನಕಪುರ, ನ.9- ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಕಾಡುಪ್ರಾಣಿ ಬೇಟೆಯಾಡಿ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ ಆಯುಧಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ತಾಲ್ಲೂಕಿನ ಬೋಗನಂಜಪ್ಪನದೊಡ್ಡಿ ಗ್ರಾಮದ ಪುಟ್ಟಸ್ವಾಮಿ, ಮುನೇಶ್ವರದೊಡ್ಡಿಯ ಆಂಜನೇಯ ಬಂಧಿತ ಆರೋಪಿಗಳು.

ಕೋಡಿಹಳ್ಳಿ ಸಮೀಪದ ಮುನೇಶ್ವರ ಬೆಟ್ಟದ ಟಿ.ಗೊಲ್ಲಹಳ್ಳಿ ಸಮೀಪದ ಮುನೇಶ್ವರ ರಕ್ಷಿತ ಅರಣ್ಯ ಬೆಟ್ಟದ ತಪ್ಪಲಿನಲ್ಲಿ ಆರೋಪಿಗಳು ನುಗ್ಗಿ ಕಡವೆಯನ್ನು ಕೊಂದು ಕುರುಬರ ಕೆರೆ ಬಳಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಕೃಷ್ಣ ಎಂಬುವರ ತಂಡ ಗಸ್ತಿನಲ್ಲಿದ್ದಾಗ ಸಿಕ್ಕಿಬಿದಿದ್ದಾರೆ.ಸ್ವಾಮಿ ಮತ್ತು ಶ್ರೀರಾಮ ಸಾಗರದ ಗುಂಡ ಎಂಬ ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ಎರಡು ಹಣೆಬ್ಯಾಟರಿ, ಚಾರ್ಜಿಂಗ್‍ಲೈಟ್, ನಾಡಬಂದೂಕು ಹಾಗು 110 ಕೆಜಿ ಕಡವೆ ಮಾಂಸವನ್ನು ತಂಡ ವಶಪಡಿಸಿಕೊಂಡಿದೆ.

ಆರೋಪಿಗಳ ವಿರುದ್ಧ ಅಕ್ರಮ ಶಶಸ್ತ್ರ ಕಾಯ್ದೆ, ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.ಸ್ಥಳಕ್ಕೆ ಕನಕಪುರ ಪಶು ವೈದ್ಯಾಧಿಕಾರಿಗಳು, ಎಸಿಎಫ್ ವೆಂಕಟೇಶ್, ಆರ್.ಎಫ್.ಒ.ದಿನೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Facebook Comments