ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಸೀಲ್‍ಡೌನ್ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.6- ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಕಂದಾಯ ಭವನದಲ್ಲಿ ಇರುವ ಉಪವಿಭಾಗಾಧಿಕಾರಿಗಳ ಕಚೇರಿಗೂ ಕೊರೊನಾ ಸೋಂಕಿನ ಭಯ ಕಾಡಲಾರಂಭಿಸಿದೆ.

ಈ ಕಚೇರಿಗಳು ಸೀಲ್‍ಡೌನ್ ಆಗಿವೆ ಎಂಬ ವದ್ದಂತಿ ಹಬ್ಬಿತ್ತು. ಆದರೆ ಸೀಲ್‍ಡೌನ್ ಆಗಿಲ್ಲ ಎಂದು ಕಚೇರಿ ಮೂಲಗಳು ಸ್ಪಷ್ಟ ಪಡಿಸಿವೆ.

ಆದರೆ ಸಾರ್ವಜನಿಕರಿಗೆ ಮೊದಲಿದ್ದಂತೆ ಮುಕ್ತ ಪ್ರವೇಶ ಇಲ್ಲ. ಅತ್ಯಗತ್ಯ ತುರ್ತು ಕೆಲಸ ಇರುವ ಸಾರ್ವಜನಿಕರು ತಾವು ಬಂದ ತುರ್ತು ಕೆಲಸದ ಕುರಿತು ವಿವರಿಸಿದಲ್ಲಿ ಆಯಾ ಕಚೇರಿ ವ್ಯವಸ್ಥಾಪಕರು ಭೇಟಿ ಕುರಿತು ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಅವರು ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾರೆ. ಶೀತ, ನೆಗಡಿ, ಕೆಮ್ಮು ಇತ್ಯಾದಿ ಲಕ್ಷಣ ಇರುವ ಸಿಬ್ಬಂದಿಗೆ ರಜೆ ತೆಗೆದು ಕೊಳ್ಳಲು ಸೂಚಿಸಿರುವುದರಿಂದ ಅನೇಕ ಸಿಬ್ಬಂದಿಗಳು ರಜೆಯಲ್ಲಿದ್ದಾರೆ.

ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಲಾಗಿದೆ. ಕೆ.ಜಿ.ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದರು.

ಅಲ್ಲಿನ ಸಿಬ್ಭಂದಿಗಳಿಗೆ ಕೊರೊನಾ ಸೋಂಕಿನ ಭಯ ಎದುರಾಗಿದೆ. ಹಾಗಾಗಿ ಬಹಳಷ್ಟು ಮಂದಿ ಕಚೇರಿಯಿಂದ ದೂರ ಉಳಿದಿದ್ದಾರೆ.

Facebook Comments