ಕಂಗನಾಗೆ ಬಿಎಂಸಿ ಶಾಕ್, ನಟಿಯ ಬಂಗಲೆಯ ಒಂದು ಭಾಗ ದ್ವಂಸ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.8-ಶಿವಸೇನೆ ಮತ್ತು ಬಾಲಿವುಡ್ ಫೈರ್‍ಬ್ರಾಂಡ್ ನಟಿ ಕಂಗನಾ ರನೌತ್ ನಡುವೆ ವಾಕ್ಸಮರ ತಾರಕಕ್ಕೇರುವಾಗಲೇ ಇಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂಥ ಬೆಳವಣಿಗೆಯೊಂದು ನಡೆದಿದೆ.

ಮುಂಬೈನ ಬಾಂದ್ರಾದ ಪಲಿ ಹಿಲ್ಸ್‍ನಲ್ಲಿರುವ ಕಂಗನಾ ಬಂಗಲೆಯ ಒಂದು ಪಾಶ್ರ್ವವನ್ನು ಬೃಹನ್ ಮುಂಬೈ ನಗರಪಾಲಿಕೆ (ಬಿಎಂಪಿ ಒಂದು ಬೆಳಗ್ಗೆ ಕೆಡವಿದೆ. ಇದರಿಂದ ಬಾಲಿವುಡ್ ನಟಿ ಮತ್ತಷ್ಟು ಕುಪಿತರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಣಿಕರ್ಣಿಕಾ ಖ್ಯಾತಿಯ ನಟಿ ಮುಂಬೈ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದು ಮತ್ತೊಮ್ಮೆ ಆರೋಪಿಸಿ ಶಿವಸೇನೆ ನಾಯಕರನ್ನು ಕೆರಳಿಸಿದ್ದಾರೆ.

ಕಂಗನಾ ಬಂಗಲೆಯಲ್ಲಿ ಅನಧಿಕೃತ ನವೀಕರಣ ಮತ್ತು ಮಾರ್ಪಾಡುಗಳನ್ನು ಮಾಡಲಾಗಿದೆ ಎಂಬ ಆರೋಪದ ಮೇಲೆ ಶಿವಸೇನೆ ನಿಯಂತ್ರಣದಲ್ಲಿರುವ ಬಿಎಂಸಿ ನಟಿಯ ಬಂಗಲೆಯ ಒಂದು ಪಾಶ್ವವನ್ನು ಇಂದು ಬೆಳಗ್ಗೆ 11 ಗಂಟೆಗೆ ಧ್ವಂಸಗೊಳಿಸಿದೆ.

ಇದಕ್ಕೂ ಮುನ್ನ ಇಂದು ಮುಂಜಾನೆಯೇ ಬಿ-ಟೌನ್ ಬೆಡಗಿಯ ಬಂಗಲೆಗೆ ತೆರಳಿದ ಬಿಎಂಸಿ ಅಧಿಕಾರಿಗಳು ಅನಧಿಕೃತ ನಿರ್ಮಾಣವನ್ನು ಕೆಡುವುದಾಗಿ ಎರಡನೇ ಬಾರೀ ನೋಟಿಸ್ ಅಂಟಿಸಿದ್ದರು.  ಈ ಬೆಳವಣಿಗೆ ಬಗ್ಗೆ ಕುಪಿತರಾಗಿರುವ ಕಂಗನಾ ಟ್ವೀಟ್ ಮಾಡಿ ಇದು ಶಿವಸೇನೆಯ ಸೇಡಿನ ಕ್ರಮ.

ನಾನು ಯಾವುದೇ ತಪ್ಪು ಮಾಡಿಲ್ಲ. ಆದರೆ ಶಿವಸೇನೆ ಮುಖಂಢರ ಧೋರಣೆಯನ್ನು ಖಂಡಿಸಿ ಟೀಕಿಸಿದ್ದಕ್ಕೆ ನನ್ನ ಬಂಗಲೆಯ ಒಂದು ಭಾಗವನ್ನು ಕೆಡವಿ ಹಾಕಲಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದು ಹೇಳಿಕೆ ನೀಡಿರುವುದರಲ್ಲಿ ತಪ್ಪೇನಿಲ್ಲ. ಶಿವಸೇನೆ ಅನುಸರಿಸುತ್ತಿರುವ ಕ್ರಮದಿಂದಲೇ ನಾನು ಈ ಹೇಳಿಕೆ ನೀಡಿದ್ದೇನೆ. ಈಗ ಆಗಿರುವುದು ಸಹ ಮುಂಬೈ, ಪಿಒಕೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ ಎಂದು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಕಂಗನಾ, ಶಿವಸೇನೆ ಮುಖಂಡರನ್ನು ಕೆರಳಿಸಿದ್ದಾರೆ.

ಈ ಮಧ್ಯೆ ಇಂದು ಅಪರಾಹ್ನ ಹಿಮಾಚಲ ಪ್ರದೇಶದ ಮನಾಲಿಯಿಂದ ವಿಮಾನದಲ್ಲಿ ಕಂಗನಾ ಮುಂಬೈಗೆ ಹಿಂದಿರುಗಲಿದ್ದು, ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

Facebook Comments