ಮೆಚ್ಚಲೇಬೇಕು ಶಿವಸೇನೆಗೇ ಸವಾಲೆಸೆದ ‘ಮಣಿಕರ್ಣಿಕಾ’ಳ ಧೈರ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

# ಮಹಾಂತೇಶ್ ಬ್ರಹ್ಮ
ಬಾಳ ಠಾಕ್ರೆ,ಇವರ ಹೆಸರು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ ಶಿವಸೇನಾ ಪಕ್ಷದ ಸಂಸ್ಥಾಪಕ, ಪ್ರಖರ ಹಿಂದುತ್ವವಾದಿ,ತನ್ನ ಬದುಕಿನ ಕೊನೆ ದಿನಗಳವರೆಗೂ ಕಾಂಗ್ರೆಸ್ ಪಕ್ಷಕ್ಕೆ ಕಟ್ಟಾ ದ್ವೇಷಿ,ಎಂತಹ ಸಂದರ್ಭದಲ್ಲೂ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಎಂದಿಗೂ ಮೈತ್ರಿ ಮಾಡಿಕೊಳ್ಳದ ದಿಟ್ಟ ರಾಜಕಾರಣಿ. ಬಾಳಠಾಕ್ರೆಯವರ ಈ ದಿಟ್ಟ ಗುಣಗಳಿಂದಲೇ ಶಿವಸೇನೆಗೆ ಇಡೀ ಮಹಾರಾಷ್ಟ್ರವೇ ಬೆಂಬಲಿಸುತಿತ್ತು.

ಬಾಳಠಾಕ್ರೆ 2012ರಲ್ಲಿ ನಿಧನರಾದ ಮೇಲು ಮೊನ್ನೆ ಮೊನ್ನೆಯವರೆಗೂ ಶಿವಸೇನೆಯ ಬಗ್ಗೆ ಜನರಿಗೆ ಹೆದರಿಕೆ ಇತ್ತು. ಅದು ಎಷ್ಟರ ಮಟ್ಟಿಗೆ ಎಂದರೆ 2009ರಲ್ಲಿ ರಾಹುಲ್ ಗಾಂಧಿ ತಮ್ಮದೇ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರು. ಮತ್ತು ಹೈ ಸೆಕ್ಯೂರಿಟಿಯೊಂದಿಗೆ ಅಂದು ಶಾರುಖ್ ಖಾನ್ ಸಮರ್ಥನೆಗೆ ಮುಂಬೈ ಗೆ ಬಂದು ಹೋಗಿದ್ದನ್ನೇ ದೊಡ್ಡ ಸಹಾಸವೆಂದು ಮಾಧ್ಯಮಗಳು ಸುದ್ದಿ ಮಾಡಿದ್ದವು.

ಶಿವಸೇನೆಯ ಒಂದು ಗುಟುರಿಗೆ ಭಾರತ ಪಾಕಿಸ್ತಾನದ ಪಂದ್ಯವೇ ರz್ದÁಗುವ ದಿನ ಇತ್ತು.ಆದರೆ ಇವತ್ತು ಅದೇ ಶಿವಸೇನೆ 5 ಅಡಿ ಹುಡುಗಿಯ ಎದುರು ಬೆತ್ತಲೆಯಾಗಿ ಬಿಟ್ಟಿತು. ಹಿಂದು ಹುಲಿ ಬಾಳ್ ಠಾಕ್ರೆಯವರ ಪುತ್ರ ಉದ್ದವ್ ಠಾಕ್ರೆ ಒಂದು ಹೆಣ್ಣಿನ ವಿರುದ್ಧ ತೊಡೆ ತಟ್ಟಿ ಸವಾಲೆಸೆದು ಸೋತು ಸುಣ್ಣವಾಗಿ ಬಿಟ್ಟರು.

ಸೆ.8ನೇ ತಾರೀಖು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿರುವ ಕಂಗನಾ ರಣಾವತ್‍ರವರ ಕಚೇರಿಯ ಕಟ್ಟಡ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗಿದೆ ಎಂದು ಮುಂಬೈ ಬೃಹನ್ ಮಹಾನಗರ ಪಾಲಿಕೆಯ ಅಧಿಕಾರಿಗಳು ನೋಟಿಸ್ ಅಂಟಿಸುತ್ತಾರೆ.ಆಗ ಕೇವಲ 15 ನಿಮಿಷದಲ್ಲೇ ಕಂಗನಾ ರಾಣಾವತ್ ಪರ ವಕೀಲರು ಕಂಗನಾರವರು ಊರಲ್ಲಿ ಇಲ್ಲದ ಕಾರಣ ನೋಟಿಸ್‍ಗೆ ಉತ್ತರಿಸಲು 7 ದಿನಗಳ ಕಾಲಾವಕಾಶ ಕೇಳುತ್ತಾರೆ.

ಇದಕ್ಕೆ ಒಪ್ಪದ ಪಾಲಿಕೆ ಅಧಿಕಾರಿಗಳು ಮರು ದಿನ ಸೆ.9ನೆ ತಾರೀಖು ಪೋಲಿಸ್ ಭದ್ರತೆಯೊಂದಿಗೆ ಬಂದು ಕಂಗನಾರವರ ಕಚೇರಿಯನ್ನು ದ್ವಂಸ ಮಾಡುತ್ತಾರೆ.ಆಮೇಲೆ ಇದರ ಬಗ್ಗೆ ಬಾಂಬೆ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಾಗಿ ಕಾಂತವಾಲ ಮತ್ತು ರಿಯಾಜ್ ಇಕ್ಬಾಲ್ ನ್ಯಾಯಮೂರ್ತಿಗಳ ಪೀಠ ವಿಚಾರಣೆ ಮಾಡಿ ಇದೊಂದು ದುರುದ್ದೇಶ ಪೂರಕ ಕೃತ್ಯ ಎಂದು ಭಾವಿಸಿ ಕಂಗನಾರವರ ಪರ ತೀರ್ಪು ನೀಡುತ್ತದೆ.

ಈಗ ವಿಚಾರಕ್ಕೆ ಬರೋಣ . ಕಂಗನಾ ರಾಣಾವತ್ ಮೇಲೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರಿಗೆ ಯಾಕೆ ಇಷ್ಟೊಂದು ಸಿಟ್ಟು, ಕೋಪ, ದ್ವೇಷ ಎಂದರೆ ಬಹಳ ನಿಗೂಢವಾಗಿ ಮೃತಪಟ್ಟ ಖ್ಯಾತ ನಟ ಸುಷಾಂತ್ ಸಿಂಗ್ ರಜಪೂತ್‍ರವರದು. ಇದೊಂದು ಅನುಮಾನಾಸ್ಪದ ಸಾವು ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಬಹಳ ಗಟ್ಟಿ ಧ್ವನಿಯಲ್ಲಿ ದೇಶದಲ್ಲಿ ಮೊದಲು ಕೂಗೆಬ್ಬಿಸಿದ್ದು ಇವರಿಬ್ಬರೇ, ರಿಪಬ್ಲಿಕ್ ವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಬಾಲಿವುಡ್ ನಟಿ ಕಂಗನಾ ರಾಣಾವತ.

ಕಂಗನಾ ರಾಣಾವತ್ ಬಗ್ಗೆ ಹೇಳುವುದಾದರೆ ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಬಂದು ಯಾವುದೇ ಪಿಲ್ಮಿ ಬ್ಯಾಕ್‍ಗ್ರೌಂಡ್ ಇಲ್ಲದೇ ತುಂಬಾ ಕಷ್ಟ ಪಟ್ಟು ತನ್ನ ಸ್ವಂತ ಪ್ರತಿಭೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹುಡುಗಿ. 3 ಬಾರಿ ರಾಷ್ಟ್ರ ಪ್ರಶಸ್ತಿ,4 ಬಾರಿ ಫಿಲಂ ಫೇರ್ ಪ್ರಶಸ್ತಿ ಅಷ್ಟೇ ಅಲ್ಲದೇ ದೇಶದ ಅತ್ಯುನ್ನತ ಗೌರವ ಎಂದೇ ಭಾವಿಸಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಸಹ ತನ್ನ ಮುಡಿಗೇರಿಸಿಕೊಂಡವರು. ಆದರೆ ದುರಾದೃಷ್ಟವಶಾತ್ ಇಂತಹ ಅದ್ಬುತ ನಟಿ ಇಂದು ಬಾಲಿವುಡ್ ನಲ್ಲಿ ಏಕಾಂಗಿ, ಈಕೆಯ ಪರವಾಗಿ ಬಾಲಿವುಡ್‍ನ ಯಾವೊಬ್ಬ ಕಲಾವಿದರು ಧ್ವನಿಯೆತ್ತಿಲ್ಲ. ಕಂಗನಾ ಇದ್ಯಾವುದನ್ನು ತಲೆಗೆ ತೆಗೆದುಕೊಂಡು ಆತ್ಮವಿಶ್ವಾಸ ಕಳೆದುಕೊಳ್ಳುವ ಪುಕ್ಕಲುತನದ ಹುಡುಗಿಯಲ್ಲ.

ಯಾಕೆಂದರೆ ಝಾನ್ಸಿರಾಣಿ ಲಕ್ಷೀ ಬಾಯಿಯ ಪಾತ್ರ ಮಾಡಿರುವ ಕಂಗನಾ ಝಾನ್ಸಿಯವರ ವೀರ ಪರಾಕ್ರಮ ಗುಣಗಳನ್ನೇ ಅಳವಡಿಸಿಕೊಂಡು ಬಿಟ್ಟಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಝಾನ್ಸಿ ರಾಣಿ ಅಂದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಇಂದು ಕಂಗನಾ ಬಾಲಿವುಡ್‍ನಲ್ಲಿ ಆಳವಾಗಿ ಬೇರೂರಿರುವ ನೆಪೋಟಿಸಂ ಮತ್ತು ಸತ್ಯ ನ್ಯಾಯ ಧರ್ಮವನ್ನು ಗಾಳಿಗೆ ತೂರಿರುವ ಶಿವಸೇನೆಯ ವಿರುದ್ಧ ಸಮರ ಸಾರಿದ್ದಾರೆ.

ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂದರೆ ಶಿವಸೇನೆಯ ಮುಖ್ಯಸ್ಥರೊಬ್ಬರು ನೀನು ಮುಂಬೈಗೆ ಬಾ ಆಮೇಲೆ ನಾವು ಏನು ಅಂತ ತೋರಿಸ್ತೀವಿ ಅಂತ ಕಂಗನಾರವರಿಗೆ ಬೆದರಿಕೆ ಒಡ್ಡಿದಾಗ ಹೇಳಿದ ಸಮಯಕ್ಕೆ ಸರಿಯಾಗಿ ಸೆ.9 ನೇ ತಾರೀಖು ಮುಂಬೈಗೆ ಕಂಗನಾ ಬಂದು ಹೋದರು. ಆಗಲೇ ನೋಡಿ ಶಿವಸೇನೆ ಎಂಬ ದೊಡ್ಡ ಪಕ್ಷ ಕಂಗನಾ ಎದುರು ಬೆತ್ತಲಾಗಿಬಿಟ್ಟಿತು.
ಈಗ ಇಡೀ ದೇಶದ ತುಂಬಾ ಕಂಗನಾ ಅಭಿಮಾನಿಗಳು ಶಿವಸೇನೆಯ ಬಗ್ಗೆ ಮಾತನಾಡುತ್ತಿರುವ ಸಾಲುಗಳಿವು….

ಸವಾಲು ಸ್ವೀಕಾರ ಮಾಡಿದ ಐದು ಅಡಿ ಹುಡುಗಿಯೊಬ್ಬಳು ನಿಗದಿ ಆದ ದಿನ ನೀವಿದ್ದಲ್ಲಿಗೆ ಬಂದು ಹೋದಳು..ಪಾಪ ನೀವು ಮಾತ್ರ ಅವಳ ಮನೆ ಕೆಡ ವುದರಲ್ಲಿ ಬ್ಯುಸಿ ಆಗಿದ್ರಿ.. ನಿನ್ನೆಯವರೆಗೆ ಹೆಸರಿನ ಹಿಂದೆ ಮಾನನೀಯ ಅನ್ನುವ ಶಬ್ದ ಬರ್ತಾ ಇತ್ತು..ಒಂದು ಹೆಣ್ಣು ಮಗಳು ನಿಮ್ಮನ್ನು ನೀನು,ತಾನು ಅಂತ ಕರೆದು ಬಿಟ್ಟಳು. ನೀವೆನಾದರು ಎದುರಿಗೆ ಸಿಕ್ಕಿದಿದ್ದರೆ ಪ್ರಾಯಶಃ ಕೆನ್ನೆ ಮೇಲೂ ಚಟಾರ್ ಅಂತ ಬೀಳ್ತಾ ಇತ್ತೇನೋ!ಅಷ್ಟೊಂದು ರೊಚ್ಚಿಗೆದ್ದಿತ್ತು ಹಿಂದೂ ಸಿಂಹಿಣಿ ರಾಷ್ಟ್ರ ಭಕ್ತೆ ಕಂಗನಾ.

ಪೂರ್ತಿ ಘಟನೆ ಯನ್ನ ನೋಡಿದರೆ ಕಂಗನಾ ರಾಷ್ಟ್ರ ಪ್ರೇಮಿಗಳ ಪಾಲಿಗೆ ಅಸಲಿ ನಾಯಕಿ ಆಗಿಬಿಟ್ಟರು. ಇನ್ನು ದ್ವೇಷದಿಂದ ನೀವು ಕೆಡವಿರುವ ಮನೆಯದ್ದೇನಿದೆ? 5 ರಿಂದ 10 ಕೋಟಿ ಹಾನಿ ಆಗಿರಬಹುದು.ಕಾಶ್ಮೀರಿ ಪಂಡಿತರು ಮತ್ತು ಅಯೋಧ್ಯೆಯ ಬಗ್ಗೆ ಸಿನಿಮಾ ಮಾಡುವೆ ಅಂತ ಈಗಾಗಲೇ ನಿಮಗೆ ಸವಾಲೆಸೆದು ಹೇಳಿದ್ದರಲ್ಲ..!ಆ ಮುಂದಿನ ಸಿನೆಮಾದಲ್ಲೇ ಸಂಪಾದನೆ ಮಾಡ್ತಾರೆ ಕಂಗನಾ. ಆದರೆ ಉದ್ದವ್‍ನ ಪಂಚೆ ಮಾತ್ರ ಪೂರ್ತಿ ದೇಶದ ಎದುರು ಬಿಚ್ಚಿದ್ದೇನೋ ನಿಜ!

ಇನ್ನೊಂದು ಕೊನೆ ಮಾತು. ಅಂದು ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯವರು ಜಯಲಲಿತಾರವರನ್ನು ಕೆಣಕಿ ಕೆಟ್ಟರು.ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕಂಗನಾ ರಾಣಾವತ್ ರವರನ್ನು ಕೆಣಕಿ ಕೆಟ್ಟರು.

Facebook Comments