”ಇಟಲಿ ಸರ್ಕಾರದ ಗುಲಾಮರಾಗಿದ್ದು ಸಾಕು” ಎಂದು ಹೇಳಿ ಸುದ್ದಿಯಾದ ಕಂಗನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ರನೌತ್ ಬಿಜೆಪಿ ಪರ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಮಾಚಲ ಪ್ರದೇಶದ ಬೆಡಗಿ ಬಾಲಿವುಡ್ ಸಿಡಿಗುಂಡು ಎಂದೇ ಖ್ಯಾತಿ ಪಡೆದಿದ್ದಾಳೆ. ಯಾವ ಸಂದರ್ಭದಲ್ಲಿ ಯಾರ ಮೇಲೆ ಈ ನಟಿ ಹರಿಹಾಯುತ್ತಾಳೆ ಎಂಬುದು ಹೇಳುವುದು ಕಷ್ಟ.

ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ ಮತ ಹಾಕಿದ ನಂತರ ಕಂಗನಾ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದಳು. ಈ ಭಾರತಕ್ಕೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಲಭಿಸುತ್ತಿದೆ.

ಈ ಹಿಂದೆ ಇಟಲಿ ಸರ್ಕಾರದ(ಸೋನಿಯಾ ಇಟಲಿ ಮೂಲದವರು) ಕೈಕೆಳಗೆ ನಾವು ಗುಲಾಮರಾಗಿದ್ದೇವು. ಆದರೆ, ಈಗ ಸದೃಢ ಸರ್ಕಾರದಿಂದ ನಮಗೆ ವಾಸ್ತವ ಸ್ವಾತಂತ್ರ ದೊರೆತಿದೆ ಎಂದು ಪ್ರತಿಕ್ರಿಯಿಸಿದಳು.

ಮತದಾನದ ಪ್ರಾಮುಖ್ಯತೆ ಕುರಿತು ಮಾತನಾಡಿದ ಮಣಿಕರ್ಣಿಕಾ ಖ್ಯಾತಿಯ ನಟಿ, ಐದು ವರ್ಷ ಕ್ಕೊಮ್ಮೆ ಮತದಾನದ ಪವಿತ್ರ ದಿನ ಬರುತ್ತದೆ. ಅದನ್ನು ಎಲ್ಲರೂ ದಯವಿಟ್ಟು ಸದುಪಯೋಗ ಮಾಡಿಕೊಳ್ಳಿ.

ಈ ಹಿಂದೆ ನಾವು ಮೊಘಲರು, ಬ್ರಿಟಿಷರು ಮತ್ತು ಇಟಲಿ ಸರ್ಕಾರಗಳ ಕೈಕೆಳಗೆ ಸೇವಕರಾಗಿದೆವು. ಸ್ವರಾಜ್ಯ ಸ್ವಾತಂತ್ರ್ಯಕ್ಕಾಗಿ ನಿಮ್ಮ ಹಕ್ಕುಗಳನ್ನು ಚಲಾಯಿಸಿ. ದಯವಿಟ್ಟು ಮತ ಹಾಕಿ ಎಂದು ಕಂಗನಾ ಮನವಿ ಮಾಡಿದ್ದಾಳೆ.

ಸದೃಢ ಭಾರತಕ್ಕಾಗಿ ಎಲ್ಲರೂ ಅದರಲ್ಲಿಯೂ ಯುವ ಜನಾಂಗ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ದೇಶದ ಸ್ಥಿತಿ ಅಧ್ವಾನವಾಗಿತ್ತು. ಅದು ಮತ್ತೆ ಮರುಕಳಿಸಬಾರದು ಎಂದು ಕ್ವೀನ್ ಖ್ಯಾತಿ ನಟಿ ಹೇಳಿದ್ದಾಳೆ.

ಮಣಿಕರ್ಣಿಕಾ : ದಿ ಕ್ವೀನ್ ಆಫ್ ಝಾನ್ಸಿ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಕೆಲವು ದೊಡ್ಡ ಪ್ರಾಜೆಕ್ಟ್‍ಗಳು ಕಂಗನಾ ಕೈಯಲ್ಲಿವೆ. ಮೆಂಟಲ್ ಹೇ ಕ್ಯಾ ಮತ್ತು ಜಯಲಲಿತಾ ಬಯೋಪಿಕ್ ಸಿನಿಮಾಗಳಲ್ಲಿ ಈ ಬೆಡಗಿ ನಟಿಸುತ್ತಿದ್ದಾಳೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin