ಬಾಲಿವುಡ್ ಬೆಡಗಿ ಕಂಗನಾಗೂ ಕೊರೊನಾ ಅಟ್ಯಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.8- ಬಾಲಿವುಡ್ ನಟಿ ಕಂಗನಾ ರಾಣವತ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಕಂಗನಾ ಅವರ ಟ್ವಿಟರ್ ಖಾತೆ ರದ್ದುಗೊಂಡಿರುವುದರಿಂದ ತಮ್ಮ ಇನ್ಸ್‍ಟಾಗ್ರಾಮ್‍ನಲ್ಲಿ ಧ್ಯಾನ ಮಾಡುತ್ತಿರುವ ತಮ್ಮ ಭಾವಚಿತ್ರ ಪೋಸ್ಟ್ ಮಾಡಿ ನನಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಕೊರೊನಾ ಸೋಂಕು ಎನ್ನುವುದು ಒಂದು ಸಣ್ಣ ಜ್ವರ ಅದರೆ, ಅದು ನೀಡುವ ಯಾತನೆ ಅಷ್ಟಿಷ್ಟಲ್ಲ. ಸೋಂಕನ್ನು ಹೋಗಲಾಡಿಸುವ ಪ್ರಯತ್ನದಲ್ಲಿ ನಾನಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ನನ್ನ ಕಣ್ಣು ಭಾರವಾದಂತಾಗುತಿತ್ತು. ಸುಸ್ತು ಇತ್ತು. ನಾನು ಹಿಮಾಚಲಗೆ ಹೋಗಬೇಕಿತ್ತು. ಹೀಗಾಗಿ ನಿನ್ನೆ ನನ್ನ ಸ್ವಾಬ್ ಟೆಸ್ಟ್‍ಗೆ ಕಳುಹಿಸಿದ್ದೆ. ಇಂದು ವರದಿ ಬಂದಿದ್ದು ನಾನು ಪಾಸಿಟಿವ್ ಆಗಿದ್ದೇನೆ. ನನ್ನ ಜೊತೆ ಸಂಪರ್ಕವಿರಿಸಿಕೊಂಡವರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin