ವ್ಯಕ್ತಿಯ ಸಜೀವ ದಹನಕ್ಕೆ ಆದೇಶ ನೀಡಿದ ಪಂಚಾಯಿತಿ ನಾಯಕ ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Burn-Alive--01

ಮಾಲ್ಡಾ, ಅ.5-ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯ ಜೀವಂತ ದಹನಕ್ಕೆ ಸ್ಥಳೀಯ ಪಂಚಾಯಿತಿಯೊಂದು ಆದೇಶ ನೀಡಿದ ನಂತರ ಆತನನ್ನು ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಸಮುದಾಯದ ನಾಯಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಇದರಿಂದ ತೀವ್ರ ಸುಟ್ಟು ಗಾಯಗಳಾಗಿರುವ ಮಂಡಲ್ ಹಂದ್ಸಾ(29) ಎಂಬುವರ ಸ್ಥಿತಿ ಶೋಚನೀಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಸಮುದಾಯದ ಮುಖಂಡನೊಬ್ಬನ ನೇತೃತ್ವದಲ್ಲಿ ನಡೆದ ಪಂಚಾಯಿತಿ(ಕಾಂಗರೂ ಕೋರ್ಟ್) ಮಂಡಲ್‍ಗೆ ಜೀವಂತ ದಹನದ ಶಿಕ್ಷೆ ಘೋಷಿಸಿತು. ಈ ತೀರ್ಪು ಹೊರ ಬೀಳುತ್ತಿದ್ದಂತೆ ಗ್ರಾಮಸ್ಥರು ಯುವಕನ ಕೈಕಾಲುಗಳನ್ನು ಕಟ್ಟಿ ಹಾಕಿ ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದರು.

ತಕ್ಷಣ ನೆರವಿಗೆ ಧಾವಿಸಿದ ಕುಟುಂಬದ ಸದಸ್ಯರು ಬೆಂಕಿ ಆರಿಸಿ ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಿದರು. ತೀವ್ರ ಸುಟ್ಟ ಗಾಯಗಳಾಗಿರುವ ಅವರ ಸ್ಥಿತಿ ಶೋಚನೀಯವಾಗಿದೆ. ಕುಟುಂಬದ ಸದಸ್ಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ತೀರ್ಪು ನೀಡಿದ ಸ್ಥಳೀಯ ಸಮುದಾಯದ ಮುಖಂಡ ಹಾಗೂ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Facebook Comments

Sri Raghav

Admin