ಕೊರೋನಾ ಸೋಂಕಿತ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಮಾ.21-ಕೊರೋನಾ ಸೋಂಕು ಬಾಧಿತ ಬಾಲಿವುಡ್‍ನ ಖ್ಯಾತ ಗಾಯಕಿ ಕನ್ನಿತ ಕಪೂರ್ ವಿರುದ್ಧ ನಿರ್ಲಕ್ಷ್ಯ ಮತ್ತು ಸೋಂಕು ಹಬ್ಬಿಸುವ ಆತಂಕ ಆರೋಪಗಳ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮಗೆ ಕೊರೋನಾ ಸೋಂಕು ಶಂಕಿತ ಪ್ರಕರಣ ಇರುವುದು ಗೊತ್ತಿದ್ದರೂ ಕೂಡ ರಾಜಕೀಯ ಮುಖಂಡರು ಭಾಗವಹಿಸಿದ್ದ ಸಮಾರಂಭ ಸೇರಿದಂತೆ ಲಖ್ನೋದಲ್ಲಿ ನಡೆದ ಮೂರು ಕಾರ್ಯಕ್ರಮಗಳಲ್ಲಿ ಕನ್ನಿಕಾ ಭಾಗವಹಿಸಿದ್ದರು.

ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿಕೊಳ್ಳುವ ಜೊತೆಗೆ ಮಾರಕ ಸೋಂಕನ್ನು ಹಬ್ಬಿಸುವ ಆತಂಕದ ಆರೋಪಗಳ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ(ಐಪಿಸಿ) ವಿವಿಧ ಪ್ರಕರಣಗಳಡಿ ಕನ್ನಿಕಾ ಕಪೂರ್ ವಿರುದ್ಧ ಲಖ್ನೋ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಖ್ನೋದ ಸರೋಜಿನಿನಗರ್ ಪೊಲೀಸ್ ಠಾಣೆಗೆ ಈ ಸಂಬಂಧ ನಗರದ ಮುಖ್ಯ ವೈದ್ಯಾಧಿಕಾರಿ ದೂರು ನೀಡಿ ಕನ್ನಿಕಾ ಕಪೂರ್‍ನಿಂದ ರೋಗ ಹಬ್ಬುವ ಸಾಧ್ಯತೆ ಆರೋಪದ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.  ನಿನ್ನೆ ಕನ್ನಿಕಾ ಕಪೂರ್‍ಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಸಾಂಕ್ರಾಮಿಕ ರೋಗ ಪತ್ತೆಯಾಗಿರುವ ಪ್ರಥಮ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್.

Facebook Comments