BREAKING : ಕನ್ನಡದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜು.02 : ಸುಮಾರು 650 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟ ಮಿಮಿಕ್ರಿ ರಾಜಗೋಪಾಲ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 69 ವಯಸ್ಸಾಗಿತ್ತು.

ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ಕೆಂಗೇರಿಯ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಹಾಸ್ಯನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದರು.ರಾಜಗೋಪಾಲ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ರಾಜ್ ಗೋಪಾಲ್‌ಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ. ಮಿಮಿಕ್ರಿ ರಾಜಗೋಪಾಲ್ ಮಿನುಗುತಾರೆ ಕಲ್ಪನಾ ಅವರ ಧ್ವನಿಯನ್ನು ಯಥಾವತ್ತಾಗಿ ಮಿಮಿಕ್ರಿ ಮಾಡುವ ಮೂಲಕ ಗಮನ ಸೆಳೆದಿದ್ದರು.

ವರನಟ ಡಾ. ರಾಜ್ ಕುಮಾರ್ ಕೂಡ ರಾಜಗೋಪಾಲ್ ಮಿಮಿಕ್ರಿ ಯನ್ನ ಮೆಚ್ಚಿ ಹೊಗಳಿದ್ದರು. ಹಾಗೆಯೇ ಹಲವಾರು ಸ್ಟೇಜ್ ಕಾರ್ಯಕ್ರಮ ಕೂಡ ನಡೆಸಿ ಗಮನ ಸೆಳೆದಿದ್ದರು.

ಕನ್ನಡ , ತಮಿಳು ಸೇರಿದಂತೆ 650 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಕ್ರೇಸ್ಟ್ರಾಗಳಲ್ಲಿ ಮಿಮಿಕ್ರಿ ಮಾಡಿ ಹೆಸರು ಮಾಡಿದ್ದ ರಾಜ್ ಗೋಪಾಲ್ ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್ ಹೀಗೆ ಕನ್ನಡ ದೊಡ್ಡ ನಟರ ಜೊತೆ ಅಭಿನಯಿಸಿದ್ದರು. ಪೋಷಕ ಕಲಾವಿದರಿಗೆ ಹೆಚ್ಚು ಅವಕಾಶವನ್ನು ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು.

ಬೆಳ್ಳಿ ಪರದೆ ಮೇಲೆ ನಗಿಸುವ ಅದೆಷ್ಟೋ ಕಲಾವಿದರ ನಿಜ ಬದುಕಿನ ಸ್ಥಿತಿ ಕಷ್ಟಕರ ವಾಗಿರುವುದಂತೂ ಸತ್ಯ. ಇನ್ನಾದರೂ ಹಿರಿಯ ಕಲಾವಿದರ ಬಗ್ಗೆ ಗಮನ ಹರಿಸಲಿ.

Facebook Comments

Sri Raghav

Admin