ಕನ್ನಡ ಚಿತ್ರ ರಂಗದಲ್ಲಿ ಶಿವರಾಮಣ್ಣ ಎಂದೇ ಖ್ಯಾತರಾಗಿದ್ದ ಶಿವರಾಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.4- ಕನ್ನಡ ಚಿತ್ರ ರಂಗದಲ್ಲಿ ಶಿವರಾಮಣ್ಣ ಅಂತಲೇ ಖ್ಯಾತರಾಗಿದ್ದ ಶಿವರಾಂ ಪೋಷಕ ನಟನಾಗಿ, ಹಾಸ್ಯನಟನಾಗಿ ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ಚೂಡಸಂದ್ರ ಗ್ರಾಮದಲ್ಲಿ 1938ರಲ್ಲಿ ಎಸ್.ಶಿವರಾಂ ಜನಿಸಿದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಬೆಂಗಳೂರಿಗೆ ಬಂದಿದ್ದರು ಶಿವರಾಂ. ಇವರ ಸೋದರ ಟೈಪ್ ರೈಟಿಂಗ್ ಇನ್ಸಿಟಿಟ್ಯೂಟ್ ನಡೆಸುತ್ತಿದ್ದರು.

ಇಲ್ಲಿಗೆ ಬಂದ ಮೇಲೆ ಗುಬ್ಬಿ ವೀರಣ್ಣ ಅವರ ನಾಟಕಗಳಿಂದ ಪ್ರೇರೇಪಿತರಾದ ಶಿವರಾಂ ನಾಟಕಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿದ್ದರು. 1958ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಕು.ರಾ. ಸೀತಾರಾಮಶಾಸ್ತ್ರಿ ಯವರಂತಹ ವಿವಿಧ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು.

ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಅವರಿಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದ ಹೆಗ್ಗಳಿಕೆ ಶಿವರಾಮ್ ಅವರದ್ದು.
ನಾಟಕ ರಂಗ ಹಾಗೂ ಚಿತ್ರರಂಗದ ನಂಟಿದ್ದ ಅವರಿಗೆ ಚಿತ್ರರಂಗದಲ್ಲೂ ಅವಕಾಶ ಸಿಕ್ಕಿತು. 1965ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶಿವರಾಂ ಅವರ ಮೊದಲ ಚಿತ್ರ ಬೆರೆತ ಜೀವ . ಆಗಿನಿಂದ ಅವರು 2000  ದಶಕದವರೆಗೆ ಅನೇಕ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದ್ದರು.

ಅಲ್ಲಿಂದ ಆರಂಭವಾದ ಅವರ ಸಿನಿ ಪಯಣ ಸುಮಾರು 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸುವಂತೆ ಮಾಡಿತ್ತು. ಚಿತ್ರ ನಿರ್ಮಾಣದಲ್ಲೂ ತಮ್ಮ ಕೈ ಚಳಕ ತೋರಿದ್ದ ಅವರು ರಾಶಿ ಬ್ರದರ್ಸ್ ಸಂಸ್ಥೆಯಡಿ ಹಲವು ಚಿತ್ರ ನಿರ್ಮಿಸಿದ್ದರು. 1970ರಲ್ಲಿ ತೆರೆಗೆ ಬಂದ ಗೆಜ್ಜೆ ಪೂಜೆ¿, ಉಪಾಸನೆ (1970)¿, ನಾನೊಬ್ಬ ಕಳ್ಳ (1979)¿ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಈ ಮೂಲಕ ಸಿನಿಮಾ ನಿರ್ಮಾಣಕ್ಕೂ ಕೊಡುಗೆ ನೀಡಿದರು.

ಪುಟ್ಟಣ್ಣ ಕಣಗಾಲ್ ರೊಂದಿಗೆ ಕÉಲಸ ಮಾಡಿದ್ದರು. ಚಂದನವನದ ಎಲ್ಲಾ ನಾಯಕ ನಟರೊಮದಿಗೆ ವರಾಮ್ ನಟಿಸಿದ್ದರು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್,ಅಂಬರೀಶ್ ಸೇರಿದಂತೆ ಎಲ್ಲ ದಿಗ್ಗಜರ ಜೊತೆ ನಟಿಸಿದ್ದಾರೆ.

ಬೆರೆತ ಜೀವ (1965), ಮಾವನ ಮಗಳು (1965), ದುಡ್ಡೇ ದೊಡ್ಡಪ್ಪ (1966), ಲಗ್ನಪತ್ರಿಕೆ (1967), ಶರಪಂಜರ (1971), ಮುಕ್ತಿ(1971), ಭಲೇ ಅದೃಷ್ಟವೋ ಅದೃಷ್ಟ(1971), ಸಿಪಾಯಿ ರಾಮು (1972), ನಾಗರಹಾವು(1972), ನಾ ಮೆಚ್ಚಿದ ಹುಡುಗ (1972), ಹೃದಯಸಂಗಮ (1972), ಕಿಲಾಡಿ ಕಿಟ್ಟು (1978), ನಾನೊಬ್ಬ ಕಳ್ಳ (1979), ಹಾಲುಜೇನು (1982), ಪಲ್ಲವಿ ಅನುಪಲ್ಲವಿ (1983), ಭಜರಂಗಿ (2013), ಬಂಗಾರದ ಮನುಷ್ಯ (2017) ಮೊದಲಾದ ಸಿನಿಮಾಗಳಲ್ಲಿ ಶಿವರಾಂ ನಟಿಸಿದ್ದರು.

ಮಕ್ಕಳ ಸೈನ್ಯ ಸೇರಿ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. 1980ರಲ್ಲಿ ಡ್ರೈವರ್ ಹನುಮಂತು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಇವರ ಸಾಧನೆಗೆ ಕೆಲ ಪ್ರಶಸ್ತಿಗಳು ಕೂಡ ಒಲಿದಿವೆ.  ಹಿರಿತೆರೆ ಮಾತ್ರವಲ್ಲದೆ ಶಿವರಾಂ ಅವರು ಕಿರುತೆರೆಯಲ್ಲೂ ನಟಿಸಿದ್ದಾರೆ. ಗೃಹಭಂಗ ಮತ್ತು ಬದುಕು ಧಾರವಾಹಿಯಲ್ಲಿ ನಟಿಸಿದ್ದಲ್ಲದೆ ಪ್ರಸ್ತುತ ಜಿ ಕ್ನನಡದಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿಯ ಸ್ವಾಮೀಜಿಯ ಪಾತ್ರ ನಿರ್ವಹಿಸುತ್ತಿದ್ದರು.

Facebook Comments