ಭರವಸೆಯ ಬೆಡಗಿ ರಚನಾ

ಈ ಸುದ್ದಿಯನ್ನು ಶೇರ್ ಮಾಡಿ

ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಡೀ ದೇಶವೇ ಕಂಗಾಲಾಗಿದೆ. ಇದಕ್ಕೆ ಚಿತ್ರರಂಗವು ಹೊರತಾಗಿಲ್ಲ. ನಟ, ನಟಿಯರು ಕೆಲಸವಿಲ್ಲದೆ ತಮ್ಮ ಪಾಡಿಗೆ ಮುಂದಿನ ಪ್ರಾಜೆಕ್ಟ್‍ಗಳ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದಾರೆ. ಆ ನಿಟ್ಟಿನಲ್ಲಿ ನೇಪಾಳಿ ಬೆಡಗಿ ರಚನಾ ದಶರಥ್ ಕೂಡ ಒಬ್ಬರು. ಮೂಲತಃ ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕದ ಎಂಟ್ರಿ ಪಡೆದಿರುವ ರಚನಾ. ಸರಸ್ವತಿ ಪುತ್ರಿಯೂ ಹೌದು.

ಎಂಬಿಎ ಮುಗಿಸಿ ಐಟಿ ಕಂಪೆನಿಯಲ್ಲಿ ಎಚ್‍ಆರ್ ಉದ್ಯೋಗದಲ್ಲಿದ್ದುಕೊಂಡೇ ಸ್ಯಾಂಕಿ ಇವೆಂಟ್ಸ್ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಾಡೆಲಿಂಗ್ ಕ್ಷೇತ್ರಕ್ಕೆ ಬಂದ ಮೇಲೆ ಬಣ್ಣದ ಲೋಕದತ್ತ ಕಾಲಿಡುವ ಚಿಂತೆಯೂ ಮನಸ್ಸಿನಲ್ಲಿ ಮಾಡಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡರು. ನಂತರ ಜನ್‍ಧನ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದರು.

ಇದರ ನಡುವೆ ಸಮರ್ಥ ಎಂಬ ಚಿತ್ರದಲ್ಲೂ ಕೂಡ ನಟಿಸಿದ್ದ ಈ ಬೆಡಗಿ ಈಗ ಅಗ್ರಸೇನಾ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರದ ಡಬ್ಬಿಂಗ್ ಕೆಲಸ ನಡೆಯಬೇಕಿದ್ದು ಈ ಚಿತ್ರದ ನಂತರ ನನಗೆ ಉತ್ತಮ ಅವಕಾಶಗಳು ಸಿಗುವ ನಿರೀಕ್ಷೆ ಇದೆ ಎಂದು ಹೇಳುತ್ತಾರೆ ರಚನಾ. ಚಿತ್ರರಂಗದ ಬಗ್ಗೆ ಅಪಾರ ಕನಸುಗಳನ್ನು ಹೊತ್ತುಕೊಂಡಿರುವ ರಚನಾ ಉತ್ತಮ ನೃತ್ಯಗಾತಿಯೂ ಆಗಿದ್ದಾರೆ.

ಮನೆಯಲ್ಲಿ ತನ್ನ ತಂದೆ, ತಾಯಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವ ರಚನಾ, ಲಾಕ್‍ಡೌನ್ ವಿಚಾರವಾಗಿ ಮಾತನಾಡುತ್ತಾ ಮನರಂಜನೆ ಜನರಿಗೆ ಕೊನೆಯ ಆಯ್ಕೆ ಎಂದೆನಿಸುತ್ತದೆ. ಸಿನಿಮಾ ಮಂದಿಗೆ ಅವಕಾಶಗಳಿಲ್ಲದೆ ಮೂಲೆಗುಂಪು ಆಗುತ್ತಾರಾ ಎಂಬ ಭಯ ಕಾಡುತ್ತಿದೆ? ಚಿತ್ರಮಂದಿರಗಳಿಲ್ಲ, ಚಿತ್ರೀಕರಣವೂ ನಡೆಯುತ್ತಿಲ್ಲ, ಉಳಿದ ಚಿತ್ರಗಳೆಲ್ಲ ಒಟಿಟಿಯಲ್ಲಿ ಬಂದರೆ ಮುಂದಿನ ಚಿತ್ರ ಜೀವನ ಹೇಗೆ ಎಂಬ ಗೊಂದಲ ಎಲ್ಲರನ್ನು ಕಾಡುತ್ತಿದೆ.

ಕಲೆಗೆ ಬೆಲೆ ಇಲ್ಲವೇನೋ ಎಂದೆನಿಸುತ್ತದೆ. ಇಷ್ಟ ಪಟ್ಟು ಬಂದಂತಹ ಈ ಕ್ಷೇತ್ರದಲ್ಲಿ ನಾವು ಏನಾದರೂ ಸಾಧಿಸಲೇಬೇಕೆಂಬ ಆಸೆ ನನ್ನದು. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಉತ್ತಮ ಅವಕಾಶಗಳು ಸಿಕ್ಕರೂ ನಟಿಸಲು ಸಿದ್ಧ ಎನ್ನುತ್ತಾರೆ. ಬಣ್ಣದ ಬದುಕನ್ನೇ ಉಸಿರಾಗಿಸಿ ಕೊಂಡಿರುವ ನಮ್ಮಂತಹ ಕಲಾವಿದರು ಈ ರಂಗವನ್ನು ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಲು ಇಷ್ಟಪಡುವುದಿಲ್ಲ ಎಂದು ರಚನಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

Facebook Comments