ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯೊಡನೆ ಕನ್ನಡ ಸಂಸ್ಕೃತಿ ಇಲಾಖೆ ವಿಲೀನಕ್ಕೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.12- ಆರ್ಥಿಕ ಮಿತವ್ಯಯದ ನೆಪವೊಡ್ಡಿ ಕನ್ನಡಿಗರ ಹೆಮ್ಮೆಯ ಇಲಾಖೆಯಾದ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯೊಡನೆ ವಿಲೀನ ಮಾಡಲು ಹೊರಟಿರುವ ಸಚಿವ ಸಿ.ಟಿ.ರವಿ ಅವರ ನಿರ್ಧಾರವನ್ನು ಕರ್ನಾಟಕ ವಿಕಾಸ ರಂಗ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ ಅವರು ಕನ್ನಡದ ಏಳಿಗೆಯಾಗಲೆಂದು ಕೆಂಗಲ್ ಹನುಮಂತಯ್ಯನವರು 1951ರಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯನ್ನು ಸ್ಥಾಪಿಸಿ ಅದಕ್ಕೆ ವಿಶೇಷವಾದ ಆರ್ಥಿಕ ನೆರವು ನೀಡಿದ್ದರು.

ಅಂದಿನಿಂದ ಈವರೆಗೆ ಈ ಇಲಾಖೆ ಭಾಷೆ, ಕಲೆ, ಸಾಹಿತ್ಯ,ಸಂಸ್ಕøತಿ, ನೃತ್ಯ , ಸಂಗೀತದ ಬೆಳವಣಿಗೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಆರ್ಥಿಕ ಮಿತವ್ಯಯದ ಕಾರಣವೊಡ್ಡಿ ಇಲಾಖೆಯನ್ನು ಬೇರೆ ಇಲಾಖೆಗೆ ವಿಲೀನ ಮಾಡುತ್ತಿರುವ ಕ್ರಮ ಸರಿಯಲ್ಲ.

ಅಗತ್ಯವಿದ್ದರೆ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು , ಇನ್ನಿತರ ಇಲಾಖೆಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯೊಂದಿಗೆ ವಿಲೀನಗೊಳಿಸಿ ಕನ್ನಡಿಗರ ಸ್ವಾಭಿಮಾನದ ಇಲಾಖೆ ಹಾಗೆಯೇ ಉಳಿಯುವಂತೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

Facebook Comments