ಕನ್ನಡ ರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವರಿಗೆ ಜಿಲ್ಲೆಗಳು ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23- ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಸಚಿವರಿಗೆ ಧ್ವಜಾರೋಹಣ ನೆರವೇರಿಸಲು ಜಿಲ್ಲೆಗಳನ್ನು ನಿಗದಿಪಡಿಸಲಾಗಿದೆ.ಈಗಾಗಲೇ ನಿಗದಿಯಾಗಿರುವಂತೆ ಉಸ್ತುವಾರಿ ಸಚಿವರುಗಳು ತಮ್ಮ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು.

ಕೆಲವು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಿಲ್ಲದ ಕಾರಣ ಜಿಲ್ಲಾಧಿಕಾರಿಗಳು ಕನ್ನಡ ರಾಜ್ಯೋತ್ಸವ ನೆರವೇರಿಸುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಸೂಚಿಸಿದೆ.

# ಉಸ್ತುವಾರಿಗಳ ನೇಮಕಾತಿ ಈ ಕೆಳಕಂಡಂತಿದೆ: ಬೆಂಗಳೂರು ನಗರ- ಬಿ.ಎಸ್.ಯಡಿಯೂರಪ್ಪ , ಮುಖ್ಯಮಂತ್ರಿ, ಬಾಗಲಕೋಟೆ- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ, ರಾಮನಗರ-ಡಾ.ಸಿ.ಎನ್.ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ, ಬಳ್ಳಾರಿ-ಲಕ್ಷ್ಮಣ್ ಸವದಿ, ಉಪಮುಖ್ಯಮಂತ್ರಿ, ಶಿವಮೊಗ್ಗ- ಕೆ.ಎಸ್.ಈಶ್ವರಪ್ಪ , ಬೆಂಗಳೂರು ಗ್ರಾಮಾಂತರ -ಆರ್.ಅಶೋಕ್, ಬೆಳಗಾವಿ-ಜಗದೀಶ್ ಶೆಟ್ಟರ್, ರಾಯಚೂರು-ಶ್ರೀರಾಮುಲು, ಚಾಮರಾಜನಗರ- ಎಸ್.ಸುರೇಶ್‍ಕುಮಾರ್, ಮೈಸೂರು-ವಿ.ಸೋಮಣ್ಣ

ಚಿಕ್ಕಮಗಳೂರು-ಸಿ.ಟಿ.ರವಿ, ಉಡುಪಿ-ಬಸವರಾಜ್ ಬೊಮ್ಮಾಯಿ, ದ.ಕನ್ನಡ- ಕೋಟಾ ಶ್ರೀನಿವಾಸ ಪೂಜಾರಿ, ತುಮಕೂರು-ಜೆ.ಸಿ.ಮಾಧುಸ್ವಾಮಿ, ಗದಗ-ಸಿ.ಸಿ.ಪಾಟೀಲ್  ಕೋಲಾರ-ಎಚ್.ನಾಗೇಶ್, ಬೀದರ್- ಪ್ರಭು ಚವ್ಹಾಣ್, ಉತ್ತರ ಕನ್ನಡ- ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ ಅವರುಗಳನ್ನು ನೇಮಿಸಲಾಗಿದೆ.

ಉಳಿದಂತೆ ಕಲಬುರಗಿ, ಚಿಕ್ಕಬಳ್ಳಾಪುರ,ಕೊಪ್ಪಳ, ದಾವಣಗೆರೆ, ಮಂಡ್ಯ, ಹುಬ್ಬಳ್ಳಿ, ಚಿತ್ರದುರ್ಗ, ಕೊಡಗು, ಹಾವೇರಿ, ಹಾಸನ , ವಿಜಾಪುರ ಯಾದಗಿರಿ ಜಿಲ್ಲೆಗಳಿಗೆ ಆಯಾಯ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣಕ್ಕೆ ನಿಗದಿಪಡಿಸಲಾಗಿದೆ.

Facebook Comments