ಕಸಾಪ ಚುನಾವಣೆ ಮುಂದೂಡುವುದು ಬೇಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಏ 24 : ಯಾವುದೇ ಕಾರಣಕ್ಕು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮುಂದೂಡುವುದು ಸರಿಯಲ್ಲ. ಮೇ 9, ನಿಗದಿಯಾದಂತೆ ನಡೆಯಬೇಕು.ಎಂದು ಸಾಹಿತಿ ಅರ್ ಜಿ ಹಳ್ಳಿ ನಾಗರಾಜ್ ಒತ್ತಾಯಿಸಿದ್ದಾರೆ ಇದನ್ನುಈಗಾಗಲೇ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಅವರು ಆಗಲೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಹಾಗೂ ಹೊರರಾಜ್ಯಗಳ ಕೆಲವು ಕಡೆ ಕಸಾಪ ಆಜೀವ ಸದಸ್ಯರು ಮತದಾನ ಮಾಡುತ್ತಾರೆ. ಎಲ್ಲಾ ಸೇರಿದರೆ 3 ಲಕ್ಷದ 10 ಸಾವಿರದ ಹತ್ತಿರ ಆಗಬಹುದು. ಅದರಲ್ಲಿ 30 ಸಾವಿರದಷ್ಟು ಸದಸ್ಯರು ಮರಣ ಹೊಂದಿದವರು, ವಿಳಾಸ ಬದಲಾದವರು ಇದ್ದಾರೆ.

ಒಂದು ವರ್ಷಕ್ಕು ಹೆಚ್ಚು ಕಾಲದಿಂದ ಹಣ ಖರ್ಚು ಮಾಡಿಕೊಂಡು, ರಾಜ್ಯದಾದ್ಯಂತ ಪ್ರವಾಸ ಮಾಡಿ ಆಜೀವ ಸದಸ್ಯತ್ವವನ್ನು ಭೇಟಿ ಆದ ಅಭ್ಯರ್ಥಿಗಳು ಇದ್ದಾರೆ. ಬೇರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿರುವಾಗ, ಕುಂಬ ಮೇಳದಲ್ಲಿ ಲಕ್ಷಾಂತರ ಜನ ಸೇರಿದಾಗ ಇಲ್ಲದ ಕಾನೂನು ಪಾಲನೆ, ಪರಸ್ಪರರ ನಡುವೆ ಕಾಣದ ಅಂತರ, ಆತಂಕ ಈಗ ಏಕೆ? ಬೆಂಗಳೂರಿನಲ್ಲಿ ಕರೋನಾ ಹೆಚ್ಚುತ್ತಿರುವುದು ನಿಜವಾದರೂ, ಈ ಕಾರಣ ಒಂದನ್ನೇ ಮುಂದಿಟ್ಟುಕೊಂಡು ಕಸಾಪ ಚುನಾವಣೆ ಮುಂದೂಡುವುದು ಸರಿಯಲ್ಲ.

ಸರ್ಕಾರದ ಕರೋನಾ ‌ನಿಯಮಾವಳಿಯಂತೆ ಅಂತರ ಕಾದು ಮತದಾನ ಮಾಡಬಹುದು. ಜೊತೆಗೆ ಮೇ 9ರ ಭಾನುವಾರ ಲಾಕ್ ಡೌನ್ ಇದ್ದರೂ, ಆ ಒಂದು ದಿನ ವಿಶೇಷ ರಿಯಾಯಿತಿ ನೀಡಿ, ಚುನಾವಣಾ ಕಮಿಷನ್ ಹಾಗೂ ಸರ್ಕಾರ ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಅವರುಮನವಿ ಮಾಡಿದ್ದಾರೆ

Facebook Comments

Sri Raghav

Admin