ನಾನು ಎಡಪಂಥವಲ್ಲ, ಬಲಪಂಥವಲ್ಲ. ಕನ್ನಡಿಗರ ಪಂಥ : ಮಹೇಶ್ ಜೋಷಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.26- ಕನ್ನಡ ಸಾಹಿತ್ಯ ಪರಿಷತ್‍ನ ನಿಬಂಧನೆಗಳಿಗೆ ಆಮೂಲಾಗ್ರ ಬದಲಾವಣೆ ತರಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಕಸಾಪ 26ನೇ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿದ ನಾಡೋಜ ಡಾ.ಮಹೇಶ್ ಜೋಷಿ ತಿಳಿಸಿದರು.ಕಸಾಪ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಡಿ.4ರಂದು ಕಸಾಪ ಮೊದಲ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ತಂತ್ರಜ್ಞಾನ ಬಳಕೆ ಸೇರಿದಂತೆ ಕಸಾಪದ ನಿರ್ಬಂಧನೆಗಳಿಗೆ ಬದಲಾವಣೆ ತರಲು ತಜ್ಞರ ಸಮಿತಿ ರೂಪಿಸಲಾಗುವುದು. ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿ ಪರಿಷತ್‍ನ ಸದಸ್ಯ ಹಾಗೂ ಲೋಪದೋಷ ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ನಾನು ಎಡಪಂಥವಲ್ಲ, ಬಲಪಂಥವಲ್ಲ. ಕನ್ನಡಿಗರ ಪಂಥ. ಹತ್ತು ಹಲವು ಕ್ರಾಂತಿಕಾರಿ ಬದಲಾವಣೆ ತರುವುದಾಗಿ ನೀಡಿರುವ ಭರವಸೆಗಳನ್ನು ಹುಸಿಗೊಳಿಸುವುದಿಲ್ಲ ಎಂದು ಅವರು ಇದೇ ವೇಳೆ ಹೇಳಿದರು.

ಕಾರ್ಯಕಾರಿಣಿ ಸಮಿತಿಗೆ ಜನಪದ, ಭಾವಗೀತೆ, ಚಲನಚಿತ್ರ ಸೇರಿದಂತೆ 26 ಕ್ಷೇತ್ರಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಪರಿಷತ್‍ನ ಸದಸ್ಯತ್ವ ಸಂಖ್ಯೆ ಒಂದು ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ನನ್ನ ಅಕಾರಾವಯಲ್ಲಿ ಕಸಾಪವನ್ನು ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ. ಪರಿಷತ್‍ನ ನಿಯಮ ಉಲ್ಲಂಘಸಿದವರಿಗೆ ಮೂರು ವರ್ಷ ಸದಸ್ಯತ್ವವನ್ನು ರದ್ದುಪಡಿಸಲಾಗುವುದು ಎಂದು ಜೋಷಿ ಹೇಳಿದರು. ಆಡಳಿತಾಕಾರಿ ನೇಮಕವಾದ ಮೇಲೆ ಕಸಾಪಗೆ ಯಾರೂ ಅಧ್ಯಕ್ಷರಾಗುವುದಿಲ್ಲ. ಆದರೂ ಕೆಲವು ಅಕಾರ ದುರುಪಯೋಗ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಸರ್ಕಾರದೊಂದಿಗೆ ಯಾವುದೇ ಸಂಘರ್ಷಕ್ಕಿಳಿಯುವುದಿಲ್ಲ. ಕನ್ನಡ, ನೆಲ, ಜಲ ವಿಷಯದಲ್ಲಿ ಜನಾಗ್ರಹ ಬಂದರೆ ಕಾನೂನು ಹೋರಾಟಕ್ಕೆ ಸಿದ್ಧರಾಗಿರುತ್ತೇವೆ. ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಮತ್ತು ಪರೀಕ್ಷೆಗಳಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಲಾಗುವುದು ಎಂದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್‍ಕುಮಾರ್, ಕಸಾಪ ಆಡಳಿತಾಕಾರಿ ರಂಗಪ್ಪ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments