ಕನ್ನಡಾಂಬೆ ತೇರು ಎಳೆಯಲು ಸಜ್ಜಾದ ಮಹೇಶ್ ಜೋಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಡಾ.ಮಹೇಶ್ ಜೋಷಿ ಅವರು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಕಸಾಪಗೆ ನಿನ್ನೆ ನಡೆದ ಚುನಾವಣೆಯಲ್ಲಿ ಭಾರೀ ಮತಗಳ ಮುನ್ನಡೆ ಸಾಸಿರುವ ಮಹೇಶ್ ಜೋಷಿ ಅವರು ಸಾಹಿತ್ಯ ಪರಿಷತ್‍ನ ಸಾರಥ್ಯವಹಿಸುವುದು ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಸಾಹಿತ್ಯ ಪರಿಷತ್‍ನ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ 21 ಅಭ್ಯರ್ಥಿಗಳು ಸ್ರ್ಪಸಿದ್ದರು. 3,10,000 ಮತದಾರರ ಪೈಕಿ 1.59 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದರು. ಇದರಲ್ಲಿ ಮಹೇಶ್ ಜೋಷಿ ಅವರು 68,525 ಮತ ಪಡೆದರೆ, ಶೇಖರ್‍ಗೌಡ ಪಾಟೀಲ್ 22,357 ಮತಗಳಿಸಿದ್ದಾರೆ.ವ.ಚ.ಚನ್ನೇಗೌಡ 16,755, ಸಿ.ಕೆ.ರಾಮೇಗೌಡ 14,110, ಮಾಯಣ್ಣ 8,791, ಸರಸ್ವತಿ ಚಿಮ್ಮಲಗಿ 6,471 ಮತ ಪಡೆದಿದ್ದಾರೆ.

ಮಹೇಶ್ ಜೋಷಿ ಅವರು ಸುಮಾರು 46 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಸಿದ್ದು, ನ.24ರಂದು ಅಕೃತವಾಗಿ ಘೋಷಣೆಯಾಗಲಿದೆ.ಕಳೆದ ಬಾರಿ ಕನ್ನಡ ಸಾಹಿತ್ಯ ಪರಿಷತ್‍ಗೆ ಚುನಾವಣೆ ನಡೆದಾಗ ಮನುಬಳಿಗಾರ್ ಅವರು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಸಿದ್ದರು.ಈ ಬಾರಿ ಮಹೇಶ್ ಜೋಷಿ ಅವರು 46ಸಾವಿರ ಮತಗಳ ಅಂತರದಿಂದ ತಮ್ಮ ಜಯವನ್ನು ದಾಖಲಿಸಿದ್ದಾರೆ.

ಇದೇ 24ರಂದು ಪರಿಷತ್‍ನ ಚುನಾವಣಾಕಾರಿಯ ಕೇಂದ್ರ ಕಚೇರಿಯಲ್ಲಿ ಗಡಿನಾಡು ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆಮತಪತ್ರಗಳ ಎಣಿಕೆ ಮಾಡಿ ಅಂತಿಮ ಫಲಿತಾಂಶ ಘೋಷಣೆಯಾಗಲಿದೆ. ರಾಜ್ಯಾಧ್ಯಕ್ಷರ ಆಯ್ಕೆಗೆ ಎಲ್ಲಾ ಜಿಲ್ಲೆಳಲ್ಲಿನ ಮತಗಳು, ಅಂಚೆ ಮತಗಳನ್ನು ಕ್ರೂಢೀಕರಿಸಿ ಅದೇ ದಿನ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರ ಅಕಾರವ ಈ ಹಿಂದೆ ಮೂರು ವರ್ಷ ಇತ್ತು. ಮನುಬಳಿಗಾರ್ ಅವರು ಅಧ್ಯಕ್ಷರಾದ ಮೇಲೆ ಬೈಲಾ ತಿದ್ದುಪಡಿ ಮಾಡಿ ಐದು ವರ್ಷಕ್ಕೆ ನಿಗದಿಪಡಿಸಲಾಯಿತು.

ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಚುನಾವಣೆ ಕೊರೊನಾ ಕಾರಣದಿಂದ ಮುಂದೂಡಿಕೆಯಾಗಿತ್ತು. ನ.21ರಂದು ಚುನಾವಣೆ ನಡೆದಿದ್ದು, ನಿನ್ನೆಯೇ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರ ಚುನಾವಣಾ ಫಲಿತಾಂಶ ಘೋಷಣೆಯಾಗಿದೆ.

ಬೆಂಗಳೂರು ನಗರ ಜಿಲ್ಲೆಗೆ ಪ್ರಕಾಶ್‍ಮೂರ್ತಿ: ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಎಂ.ಪ್ರಕಾಶ್‍ಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಪ್ರತಿಸ್ರ್ಪ ಎಂ.ತಿಮ್ಮಯ್ಯ ವಿರುದ್ಧ 1347 ಮತಗಳ ಅಂತರದಿಂದ ಗೆಲುವು ಸಾಸಿದ್ದಾರೆ. ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನವಾಗಿದ್ದು, 37 ಸಾವಿರ ಮತದಾರರಿದ್ದರು. ಅತಿ ಕಡಿಮೆ ಅಂದರೆ ಶೇ.28.88ರಷ್ಟು ಅಂದರೆ 10,538 ಮಂದಿ ಮಾತ್ರ ಮತ ಚಲಾಯಿಸಿದ್ದರು. ಈ ಪೈಕಿ ಪ್ರಕಾಶ್ ಮೂರ್ತಿಯವರು 5,314ಮತಗಳಿಸಿದ್ದರೆ, ಎಂ.ತಿಮ್ಮಯ್ಯ 3,987 ಮತ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಬಿ.ಎಂ.ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಕೋಲಾರ ಜಿಲ್ಲಾಧ್ಯಕ್ಷರಾಗಿ ಗೋಪಾಲಗೌಡ, ರಾಯಚೂರು ಜಿಲ್ಲಾ ಕಸಾಪಗೆ ಹಳ್ಳುಂಡಿ ರಂಗಣ್ಣಪಾಟೀಲ್ ವಿಜೇತರಾಗಿದ್ದಾರೆ.

ಕೊಡಗು ಜಿಲ್ಲಾ ಕಸಾಪಗೆ ಕೇಶವಕಾಮತ್, ಸಾಂಸ್ಕøತಿಕ ನಗರಿ ಮೈಸೂರಿಗೆ ಮಡ್ಡಿಗೆರೆ ಗೋಪಾಲ್ ಆಯ್ಕೆಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಅಧ್ಯಕ್ಷರಾಗಿ ಪ್ರೊ.ಡಾ. ಕೋಡಿರಂಗಪ್ಪ, ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಅಜ್ಜಂಪುರ ಸೂರಿ ಶ್ರೀನಿವಾಸ್ ಗೆಲುವು ಸಾಸಿದ್ದಾರೆ.
ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾಗಿ ಬಿ.ವಾಮದೇವಪ್ಪ ಗೆಲುವು ಸಾಸಿದ್ದಾರೆ.

Facebook Comments