ನರರಾಕ್ಷಸರನ್ನು ಸಂಹರಿಸಿದ ಗಂಡು ಮೆಟ್ಟಿದ ನಾಡಿನ ವೀರ ಕನ್ನಡಿಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.6-ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೈದರಾಬಾದ್‍ನ ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ನಡೆಸಿದ್ದು, ಕರ್ನಾಟಕ ಮೂಲದ ಅಧಿಕಾರಿ ವಿಶ್ವನಾಥ್ ಸಜ್ಜನವರ್. ಮೂಲತಃ ಹುಬ್ಬಳ್ಳಿಯವರಾದ ವಿಶ್ವನಾಥ್ ಸಜ್ಜನವರ್ ಶಂಶಾಬಾದ್ ನಗರ ಪೊಲೀಸ್ ಆಯುಕ್ತರು. ಇದೀಗ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಸಿಂಗಂ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗುತ್ತಿದ್ದು , ಅನೇಕರು ವಿಶ್ವನಾಥ್ ಸಜ್ಜನವರ್ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನ.27ರಂದು ದಿಶಾಳ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿ ಅವಳನ್ನು ಜೀವಂತವಾಗಿ ಸುಟ್ಟು ಹಾಕಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದ ತೆಲಾಂಗಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ತನಿಖೆಯ ನೇತೃತ್ವವನ್ನು ವಿಶ್ವನಾಥ್ ಸಜ್ಜನವರ್‍ಗೆ ನೀಡಿದ್ದರು. ಆರೋಪಿಗಳ ವಿರುದ್ದ ಅತ್ಯಂತ ಶೀಘ್ರವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಈ ಪ್ರಕರಣದಲ್ಲಿ ಯಾರೊಬ್ಬರೂ ಹಸ್ತಕ್ಷೇಪ ಮಾಡದಂತೆ ವಿಶ್ವನಾಥ್ ಸಜ್ಜನವರ್ ಅವರಿಗೆ ಸಂಪೂರ್ಣವಾಗಿ ಮುಕ್ತ ಸ್ವತಂತ್ರ ನೀಡಲಾಗಿತ್ತು.

ಈ ಹಿಂದೆ ತೆಲಂಗಾಣದಲ್ಲಿ ಎನ್‍ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಯಾಗಿರುವ ಅವರು ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನ. ಕೆಲವು ಗಂಭೀರವಾದ ಕೃತ್ಯಗಳನ್ನು ಎಸಗಿ ಸಮಾಜಕ್ಕೆ ಕಂಟಕರಾಗಿದ್ದ ಅನೇಕರನ್ನು ಎನ್‍ಕೌಂಟರ್ ಮೂಲಕವೇ ಹುಟ್ಟಡಗಿಸಿದ್ದರು.  ಹೀಗಾಗಿಯೇ ಸಜ್ಜನವರ್ ಮೇಲೆ ಸಿಎಂ ಚಂದ್ರಶೇಖರ್ ರಾವ್ ಸಂಪೂರ್ಣವಾಗಿ ನಂಬಿಕೆಯಿಟ್ಟು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಆರೋಪಿಗಳ ಎಡೆಮುರಿ ಕಟ್ಟುವಂತೆ ನಿರ್ದೇಶನ ನೀಡಿದ್ದರು.

ಇದೀಗ ನಾಲ್ವರು ಅತ್ಯಾಚಾರಿಗಳ ಮೇಲೆ ವಿಶ್ವನಾಥ್ ಸಜ್ಜನವರ್ ಮತ್ತು ಅವರ ತಂಡಕ್ಕೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದ ಸಿಂಗಂ ಎಂದೇ ಅನೇಕರು ಟ್ರೆಂಡ್ ಸೃಷ್ಟಿಸಿದ್ದಾರೆ. ಇನ್ನೂ ವಿಶೇಷವೆಂದರೆ ವಿಶ್ವನಾಥ್ ಸಜ್ಜನವರ್ ಕರ್ನಾಟಕದ ಹುಬ್ಬಳ್ಳಿ ಮೂಲದವರು.

ಹುಬ್ಬಳ್ಳಿಯ ಪಗಣಿಓಣಿಯವರಾದ ವಿಶ್ವನಾಥ್ ತಂದೆ ಚನ್ನಬಸಪ್ಪ ಬಿ.ಸಜ್ಜನವರ್ ಅವರಿಗೆ ಮೂರು ಜನ ಮಕ್ಕಳಲ್ಲಿ ಇವರೇ ಚಿಕ್ಕವರು. ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ನಂತರ ಜೆಜೆ ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ಮುಗಿಸಿ ಕರ್ನಾಟಕ ವಿವಿಯ ಕೌಶಲಿಯಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದರು.

1996ರಲ್ಲಿ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‍ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಂಧ್ರಪ್ರದೇಶದ ಐಪಿಎಸ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಮೊದಲು ಕಡಪ ಜಿಲ್ಲೆಯ ಪುಲಿವೆಂದಲದಿಂದ ಡಿವೈಎಸ್ಪಿಯಾಗಿ ವೃತ್ತಿ ಜೀವನ ಆರಂಭಿಸಿದ ಸಜ್ಜನವರ್ ತೆಲಾಂಗಣದಲ್ಲಿ ಎನ್‍ಕೌಂಟರ್ ಸ್ಪೆಷಾಲಿಸ್ಟ್ ಎಂದೇ ಹೆಸರುವಾಸಿಯಾಗಿದ್ದಾರೆ.

ಈ ಹಿಂದೆ ವಾರಂಗ್‍ನಲ್ಲಿ ವಿವಾಹಿತ ಮಹಿಳೆ ಮೇಲೆ ನಡೆದ ಆಟೋ ಚಾಲಕ ಆಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಎನ್‍ಕೌಂಟರ್ ನಡೆಸಿದ್ದರು. ಹೀಗೆ ಅತ್ಯಂತ ಜಟಿಲವಾದ ಪ್ರಕರಣಗಳನ್ನು ಬೇಧಿಸುತ್ತಿದ್ದ ವಿಶ್ವನಾಥ್ ಸಜ್ಜನವರ್ ಇಂದು ಬೆಳಗಾಗುವುದರೊಳಗೆ ದೇಶಾದ್ಯಂತ ಮನೆಮಾತಾಗಿದ್ದಾರೆ.

Facebook Comments

Sri Raghav

Admin