BIG NEWS : ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್‍ದೇವ್‍ಗೆ ಹೃದಯಾಘಾತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ. 23- ಭಾರತ ತಂಡಕ್ಕೆ 1983ರಲ್ಲಿ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಕಪಿಲ್‍ದೇವ್‍ಗೆ ಹೃದಯಾಘಾತವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖ್ಯಾತ ಪತ್ರಕರ್ತೆ ಟೀನಾ ಠಾಕರ್ ತಮ್ಮ ಟ್ವಿಟ್ಟರ್‍ನಲ್ಲಿ ಕಪಿಲ್‍ದೇವ್(61) ಅವರಿಗೆ ಹೃದಯಾಘಾತವಾಗಿರುವುದರಿಂದ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿ ತಿಳಿಸಿದ್ದಾರೆ.

ವಿಶ್ವಕಪ್ ಗೆದ್ದ ನಾಯಕ ಬೇಗ ಚೇತರಿಸಿಕೊಳ್ಳಲಿ ಎಂದು ಕಪಿಲ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಚಂಡೀಘಡದಲ್ಲಿ ಜನವರಿ 6,1959ರಂದು ಜನಿಸಿದ ಕಪಿಲ್‍ದೇವ್ ತಮ್ಮ 16 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಭಾರತ ತಂಡವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದರು. ಇವರ ನಾಯಕತ್ವದಲ್ಲೇ ಭಾರತ ತಂಡವು ಚೊಚ್ಚಲ ವಿಶ್ವಕಪ್ ಗೆದ್ದಿತ್ತು.

ಉತ್ತಮ ಅಲೌಂಡರ್ ಆಗಿದ್ದ ಕಪಿಲ್‍ದೇವ್ ಎಷ್ಟೋ ಪಂದ್ಯಗಳನ್ನು ತಮ್ಮ ಸಾಮಥ್ರ್ಯದಿಂದಲೇ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 131 ಟೆಸ್ಟ್‍ನಲ್ಲಿ 8 ಶತಕ ಹಾಗೂ 27 ಅರ್ಧಶತಕ ಸೇರಿದಂತೆ 5248 ಹಾಗೂ 434 ವಿಕೆಟ್ ಮತ್ತು 225 ಏಕದಿನ ಪಂದ್ಯಗಳಿಂದ 1 ಶತಕ ಹಾಗೂ 14 ಅರ್ಥಶತಕಗಳ ನೆರವಿನಿಂದ 3783 ರನ್ ಹಾಗೂ 253 ವಿಕೆಟ್ ಕಬಳಿಸಿದ್ದಾರೆ.1983ರ ವಿಶ್ವಕಪ್‍ನಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್‍ದೇವ್ ಅಜೇಯ 175 ರನ್ ಗಳಿಸಿದ್ದರು.

Facebook Comments