ಇನ್‍ಸ್ಟಾಗ್ರಾಂಗೆ ಕರೀನಾ ಎಂಟ್ರಿ, ಅಭಿಮಾನಿಗಳು ಥ್ರಿಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಬಾಲಿವುಡ್ ಅಭಿನೇತ್ರಿ ಕರೀನಾ ಕಪೂರ್ ಖಾನ್, ಅಭಿಮಾನಿಗಳ ಬಹುದಿನಗಳ ಕೋರಿಕೆಯೊಂದನ್ನು ಕೊನೆಗೂ ನೆರವೇರಿಸಿದ್ದಾಳೆ. ಕೆಕೆಕೆ ಇನ್‍ಸ್ಟಾಗ್ರಾಂಗೆ ಸೇರ್ಪಡೆಯಾಗಿರುವುದು ಫ್ಯಾನ್‍ಗಳಿಗೆ ಖುಷಿಯಾಗಿದೆ. ಈ ಸೋಷಿಯಲ್ ಮೀಡಿಯಾ ವೇದಿಕೆಗೆ ತಮ್ಮ ಮೆಚ್ಚಿನ ನಟಿ ಸೇರ್ಪಡೆಯಾಗಿ ತಮ್ಮೊಂದಿಗೆ ಸಂವಹನ ನಡೆಸಬೇಕೆಂದು ಅಸಂಖ್ಯಾತ ಅಭಿಮಾನಿಗಳು ಹಿಂದಿನಿಂದಲೂ ಕರೀನಾಗೆ ಪ್ರೀತಿಪೂರ್ವಕ ಒತ್ತಾಯ ಮಾಡುತ್ತಲೇ ಬಂದಿದ್ದರು.

ಅವರ ಮನವಿಗೆ ಈಗ ಓಗೊಟ್ಟಿರುವ ಈ ತಾರೆ ಇನ್‍ಸ್ಟಾಗ್ರಾಂಗೆ ಸೇರ್ಪಡೆಯಾಗಿ ತನ್ನ ಮೊದಲ ಫೋಟೋದೊಂದಿಗೆ ಫ್ಯಾನ್‍ಗಳು ಮತ್ತು ಫಾಲೋವರ್‍ಗಳನ್ನು ಥ್ರಿಲ್ ಆಗಿಸಿದ್ದಾಳೆ. ಕರೀನಾ ಸಾಮಾಜಿಕ ಜಾಲತಾಣಕ್ಕೆ ಸೇರ್ಪಡೆಯಾಗಿರುವುದನ್ನು ಅಭಿಮಾನಿಗಷ್ಟೇ ಅಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಸ್ವಾಗತಿಸಿದ್ದಾರೆ. ಸಹೋದರಿ ಮತ್ತು ನಟಿ ಕರಿಷ್ಮಾ ಕಪೂರ್ ಕೂಡ ತನ್ನ ಸಹೋದರಿಯ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾಳೆ.

ಕರೀನಾ ಮೊನ್ನೆಯಷ್ಟೇ ತನ್ನ ಮೊದಲ ಟೀಸರ್ ವಿಡಿಯೋದಲ್ಲಿ ನಾನು ಶೀಘ್ರ ಬರಲಿದ್ದೇನೆ ಎಂದು ಇನ್‍ಸ್ಟಾಗ್ರಾಂ ಸೇರ್ಪಡೆ ಬಗ್ಗೆ ಮುನ್ಸೂಚನೆ ನೀಡಿದ್ದಳು. ಇನ್‍ಸ್ಟಾಗ್ರಾಂಗೆ ಸೇರ್ಪಡೆಯಾಗುತ್ತಿದ್ದಂತೆ ತನ್ನ ಭರ್ಜರಿ ಗ್ಲಾಮರ್ ಲುಕ್‍ನ ಫೋಟೋ ಫೋಸ್ಟ್ ಮಾಡಿದ್ದಾಳೆ. ಬ್ಲಾಕ್ ಟೈಟ್ಸ್, ಬ್ಲಾಕ್‍ಡ್ರಾಪ್ ಮತ್ತು ಸ್ಟೈಲಿಷ್ ಜಾಕೆಟ್‍ನಲ್ಲಿ ಸಖತ್ ಹಾಟ್ ಆಗಿ ಕಾಣುತ್ತಿದ್ದಾಳೆ. ಈ ಫೋಟೋಗೆ 3ಕೆ ನೀಡಿರುವ ಶೀರ್ಷಿಕೆ : ಬೆಕ್ಕು ಚೀಲದಿಂದ ಹೊರಬಂದಿದೆ. ಹಲೋ ಇನ್‍ಸ್ಟಾಗ್ರಾಂ.

ಈಕೆ ಸೋಷಿಯಲ್ ಮೀಡಿಯಾಗೆ ಜಾಯಿನ್ ಆಗುತ್ತಿದ್ದಂತೆ ಈಗಾಗಲೇ 55,700 ಹಿಂಬಾಲಕರು ಸೇರ್ಪಡೆಯಾಗಿದ್ದು, 70,907 ಮಂದಿ ಫೋಟೋವನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ. ಕರೀನಾ ಈಗ ಅಮಿರ್‍ಖಾನ್ ಅಭಿನಯದ ಮತ್ತು ಅದ್ವೈತ್ ಚಂದನ್ ನಿರ್ದೇಶನದ ಲಾಲ್ ಸಿಂಗ್ ಛಡ್ಡಾ ಚಿತ್ರದಲ್ಲಿ ಬ್ಯುಸಿ. ಇದು ಹಾಲಿವುಡ್‍ನ ಟಾಮ್ ಹಾಂಕ್ಸ್(ಅಮಿರ್ ಖಾನ್ ಹೋಲುವ ನಟ) ಅಭಿನಯದ ಸೂಪರ್‍ಹಿಟ್ ಫಾರೆಸ್ಟ್ ಗಂಪ್ ಚಿತ್ರದ ರೀಮೇಕ್.

Facebook Comments