ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಖಾನ್
ಈ ಸುದ್ದಿಯನ್ನು ಶೇರ್ ಮಾಡಿ
ಮುಂಬೈ,ಫೆ.21- ಬಾಲಿವುಡ್ನ ಸ್ಟಾರ್ ದಂಪತಿಯಾದ ಕರೀನಾಕಪೂರ್ ಹಾಗೂ ಸೈಫ್ಅಲಿಖಾನ್ ದಂಪತಿ ಇಂದು ತಮ್ಮ ಕುಟುಂಬದ ಹೊಸ ಸದಸ್ಯನನ್ನು ಸ್ವಾಗತಿಸಿದ್ದಾರೆ. 2012ರಲ್ಲಿ ವಿವಾಹವಾದ ಸೈಫ್ ಹಾಗೂ ಕರೀನಾ ದಂಪತಿಗೆ ಈಗಾಗಲೇ 4 ವರ್ಷದ ತೈಮೂರ್ ಎಂಬ ಮಗನಿದ್ದು ಇಂದು ಬೆಳಗ್ಗೆ 9 ಗಂಟೆಗೆ ಬ್ರೀಜ್ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಕರೀನಾಗೆ ಗಂಡುಮಗುವಾದ ವಿಷಯ ತಿಳಿದ ಆಕೆಯ ತಂದೆ ಹಾಗೂ ನಟ ರಣಬೀರ್ ಕಪೂರ್ ಅವರು ತಾಯಿ ಹಾಗೂ ಮಗು ಆರೋಗ್ಯವಾಗಿದೆ, ಇಂದು ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಎಂಟ್ರಿ ಆಗಿದೆ ಎಂದು ತಮ್ಮ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ಕರೀನಾ ಎರಡನೇ ಬಾರಿಗೆ ಗರ್ಭವತಿ ಆಗಿರುವ ವಿಷಯವನ್ನು ಆಗಸ್ಟ್ನಲ್ಲಿ ಸೈಫ್ ದಂಪತಿ ಘೋಷಿಸಿತ್ತು. ಕರೀನಾ ತಮ್ಮ ಮೊದಲ ಪುತ್ರನಿಗೆ ತೈಮೂರ್ ಎಂಬ ಹೆಸರಿಟ್ಟಾಗ ಭಾರೀ ಚರ್ಚೆಯಾಗಿತ್ತು, ಈಗ ಎರಡನೇ ಪುತ್ರನಿಗೆ ಏನು ಹೆಸರಿಡುತ್ತಾರೆ ಎಂಬ ಕುತೂಹಲಗಳು ಬೆಬೊ ಹಾಗೂ ಸೈಫ್ ಅಭಿಮಾನಿಗಳಲ್ಲಿ ಮೂಡಿದೆ.
Facebook Comments