ಮೇ.10 ರಿಂದ 14 ದಿನ ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ನಿರೀಕ್ಷೀತ ಮಟ್ಟದಲ್ಲಿ ಕೋವಿಡ್ – 19 ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೇ 10 ( ಸೋಮವಾರ ) ದಿಂದ ಎರಡು ವಾರಗ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲು ರಾಜ್ಯ ಸರಕಾರ ತೀಮಾ9ನಿಸಿದೆ. ಇದರಿಂದಾಗಿ ಬರುವ ಸೋಮವಾರದಿಂದ ಕರ್ನಾಟಕ ಸರಿಸುಮಾರು ಎರಡು ವಾರಗಳ ಕಾಲ  ಸಂಪೂರ್ಣವಾಗಿ ಸ್ತಬ್ದಗೊಳ್ಳಲಿದೆ.

ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕೃತ ಆದೇಶ ಹೊರಡಿಸಲಿದ್ದು, ಎರಡು ವಾರಗಳ ಲಾಲ ಲಾಕ್ ಡೌನ್ ಜಾರಿಯಾಗಲಿದೆ. ಅಗತ್ಯ ಸೇವೆಗಳಾದ ಹಾಲು, ಹಣ್ಣು ,ತರಕಾರಿ, ಔಷಧಿ, ದಿನಪತ್ರಿಕೆ, ಅಡುಗೆ ಅನಿಲ ( ಸಿಲಿಂಡರ್ ಗ್ಯಾಸ್ ) ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳಿಗೂ ಕಡಿವಾಣ ಬೀಳಲಿದೆ.

ಮಧ್ಯ ಮತ್ತು ಮಾಂಸದ ಅಂಗಡಿಗಳು ಬೆಳಗ್ಗೆ ‌10 ಗಂಟೆಯವರೆಗೆ ತೆರೆಯಲಿದ್ದು, ಈ ಬಾರಿ ಹಿಂದಿಗಿಂತಲೂ ನಿಯಮಗಳು ಜಾರಿಯಲ್ಲಿರುತ್ತವೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಬೆಳಗ್ಗೆ ಸಚಿವರಾದ ಆರ್‌ ಅಶೋಕ್, ‌ಡಾ.ಕೆ.ಸುಧಾಕರ್, ಡಿಸಿಎಂಗಳಾದ ಡಾ.ಅಶ್ವಥ್ ನಾರಾಯಣ, ಲಕ್ಮಣ್ ಸವಧಿ ಸೇರಿದಂತೆ ಅಧಿಕಾರಳ ಸಭೆ ನಡೆಯಿತು.

ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಕನಿಷ್ಟ ಪಕ್ಷ ಎರಡು ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ತಾಂತ್ರಿಕ ಸಲಹಾ ಸಮಿತಿಯು ಕೂಡ ಲಾಕ್ ಡೌನ್ ಜಾರಿ ಮಾಡುವಂತೆ ಶಿಫಾರಸ್ಸು ಮಾಡಿದ ಕಾರಣ ಸಭೆಯಲ್ಲಿ ಒಮ್ಮತದ ತೀಮಾ9ನಕ್ಕೆ ಬರಲಾಯಿತು.

ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು.ಜನರು ಲಾಕ್ ಡೌನ್ ಸರಿಯಾಗಿ ಪಾಲನೆ ಮಾಡದಿದ್ದರೆ, ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂಬ ಸುಳಿವು ‌ನೀಡಿದ್ದರು.ಇನ್ನೂ ಎರಡು ವಾರಗಳಲ್ಲಿ ರಾಜ್ಯದಲ್ಲಿ ಸೋಂಕು ಉತ್ತುಂಗಕ್ಕೆ ಏರಲಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ನ ಲೈಫ್ ಕೋರ್ಸ್ ಎಪಿಡೆಮಿಯಾಲಜಿ ಮುಖ್ಯಸ್ಥ ಡಾ. ಗಿರಿಧರ ಆರ್ ಬಾಬು ತಿಳಿಸಿದ್ದಾರೆ.

ಟೆಸ್ಟಿಂಗ್ ಸಂಖ್ಯೆ ವಿಶೇಷವಾಗಿ ಬೆಂಗಳೂರಿನಲ್ಲಿ ಕಡಿಮೆ ಇರುವುದರಿಂದ ಸೋಂಕು ಪತ್ತೆ ಪ್ರಸ್ತುತ ಅನಿಯಮಿತವಾಗಿವೆ. ಉತ್ತುಂಗದ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆಯ ಬಗ್ಗೆ ಸ್ಪಷ್ಟತೆ ನೀಡುವುದಿಲ್ಲ, ಆದರೆ, ಟೆಸ್ಟಿಂಗ್ ಹೊರತಾಗಿಯೂ, ಮುಂದಿನ ಎರಡು ವಾರಗಳಲ್ಲಿ ಉತ್ತುಂಗಕ್ಕೇರುವುದನ್ನು ನಾವು ನೋಡಬಹುದಾಗಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ. ಗಿರಿಧರ ಬಾಬು ಅವರು ಹೇಳಿದ್ದರು.

ಕನಿಷ್ಠ 10 ರಿಂದ 14 ದಿನಗಳವರೆಗೆ ಸಾವುನೋವುಗಳು ಹೆಚ್ಚಾಗಲಿವೆ ಎಂದು ಹೇಳಿರುವ ಬಾಬು, ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಆಮ್ಲಜನಕದೊಂದಿಗೆ ತಪಾಸಣೆ ಮತ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು, ಇಂತಹ ಕೇಂದ್ರಗಳು ಪ್ರತಿ ಐದು ಕಿಲೋಮೀಟರ್ ಗಳ ಅಂತರದಲ್ಲಿರಬೇಕು. ಆ ಮೂಲಕ ಬಿಕ್ಕಟ್ಟು ಸ್ವಲ್ಪ ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದ್ದರು.

ಈಗಾಗಲೇ ಕರ್ಫ್ಯೂ ಜಾರಿಯಾಗಿ 10 ದಿನ ಕಳೆದರೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ,ಏಪ್ರಿಲ್ 26 ರಿಂದ ಮೇ 5ರ ವರೆಗೂ ರಾಜ್ಯದಲ್ಲಿ ಒಟ್ಟು 4,01,845 ಹೊಸ ಪ್ರಕರಣ ದೃಢಪಟ್ಟಿದೆ, ಕಠಿಣ ಮಾರ್ಗಸೂಚಿ ಜಾರಿಯಲ್ಲಿದ್ದರೂ ಇಷ್ಟೊಂದು ಪ್ರಮಾಣದ ಸೋಂಕು ಆರೋಗ್ಯ ಇಲಾಖೆಗೆ ಸಂಕಷ್ಟ ತಂದಿದೆ.

ಅಲ್ಲದೇ ಸಕ್ರಿಯ ಪ್ರಕರಣಗಳ ಸಂಖ್ಯೆ ಕೊರೊನಾ ಕರ್ಫ್ಯೂಗೂ ಮೊದಲು ಏಪ್ರಿಲ್ 26 ರಂದು 2,81,042 ಇದ್ದರೆ ಮೇ 5ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,87,288ಕ್ಕೆ ಬಂದು ತಲುಪಿದೆ. ಕೋವಿಡ್ ಸೋಂಕಿತರ ಮರಣ ಪ್ರಮಾಣ ಶೇ.0.67 ರಿಂದ ಶೇ.0.69ಕ್ಕೆ ಹೆಚ್ಚಳವಾಗಿ ಆತಂಕ ಮೂಡಿಸಿದೆ.

ಮೇ 05: 50,112ಕಳೆದ ನಾಲ್ಕೈದು ದಿನಗಳಲ್ಲಿ ಸತತವಾಗಿ 40 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿನ ಪ್ರಕರಣ ದೃಢವಾಗುತ್ತಿದೆ. ರಾಜ್ಯಾದ್ಯಂತ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದರೂ ಸೋಂಕಿನ ಸಂಖ್ಯೆ ಸತತವಾಗಿ ಏರುತ್ತಲೇ ಇದೆ.

ಕರ್ಫ್ಯೂಗೂ ಮೊದಲು 30 ಸಾವಿರ ಕೆಳಗಡೆ ಇದ್ದ ಸೋಂಕಿತರ ಸಂಖ್ಯೆ ಇದೀಗ 50 ಸಾವಿರ ದಾಟಿದ್ದು ರಾಜ್ಯ ಸರ್ಕಾರವನ್ನು ತಲ್ಲಣಗೊಳ್ಳುವಂತೆ ಮಾಡಿದೆ.ಕೊರೊನಾ ಸ್ಫೋಟದಿಂದಾಗಿ ರಾಜ್ಯದಲ್ಲಿ ಸೋಂಕಿತರು ಬೆಡ್​ಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಆಕ್ಸಿಜನ್ ಕೊರತೆ, ರೆಮ್​​ಡಿಸಿವಿರ್ ಕೊರತೆ, ಐಸಿಯು, ವೆಂಟಿಲೇಟರ್ ಸಮಸ್ಯೆ ಹೆಚ್ಚಾಗುತ್ತಿದೆ, ಇದನ್ನೆಲ್ಲ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುವಂತಾಗಿದೆ. ಆಕ್ಸಿಜನ್, ರೆಮ್​​ಡಿಸಿವಿರ್ ವ್ಯವಸ್ಥೆ ಮಾಡುವಲ್ಲಿ ಸಫಲವಾಗುತ್ತಿದ್ದರೂ ಐಸಿಯು, ವೆಂಟಿಲೇಟರ್ ವ್ಯವಸ್ಥೆ ಹೊಸ ಸವಾಲು ತಂದಿದೆ.

ಐಸಿಯು ಬೆಡ್ ಸಿಗದೇ ಇಂದು ಸಿಎಂ ನಿವಾಸಕ್ಕೇ ಸೋಂಕಿತ ವ್ಯಕ್ತಿಯನ್ನು ಕರೆತಂದು ಗೋಳಾಡಿದ ಸನ್ನಿವೇಶ ಸಮಸ್ಯೆಯ‌ ಗಂಭೀರತೆಗೆ ಸಾಕ್ಷಿಯಾಗಿದೆ.ಬೆಂಗಳೂರಿನಲ್ಲಿ ಐಸಿಯು, ವೆಂಟಿಲೇಟರ್, ಬೆಡ್ ಕೊರತೆ ಸಾಕಷ್ಟು ಪ್ರಮಾಣದಲ್ಲಿ ತಲೆದೂರಿರುವ ಹಿನ್ನೆಲೆ ಸರ್ಕಾರ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣದ ಯೋಜನೆ ಹಾಕಿಕೊಂಡಿದೆ.

15 ದಿನದಲ್ಲಿ 2 ಸಾವಿರ ಐಸಿಯು ಬೆಡ್​​​ಗಳ ಮೇಕ್ ಶಿಫ್ಟ್ ಆಸ್ಪತ್ರೆ ಆರಂಭಿಸಲು ಮುಂದಾಗಿದೆ. ಇದರಲ್ಲಿ 800 ವೆಂಟಿಲೇಟರ್ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತಿದೆ. ವಿಕ್ಟೋರಿಯಾ ಆವರಣ, ಬೌರಿಂಗ್ ಆಸ್ಪತ್ರೆ, ನಿಮ್ಹಾನ್ಸ್, ರಾಜೀವ್ ಗಾಂಧಿ ಆಸ್ಪತ್ರೆ ಸೇರಿದಂತೆ ಇತರ ಕಡೆ ಮೇಕ್ ಶಿಫ್ಟ್ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆದರೆ ಇದೆಲ್ಲಾ ಕೇವಲ ಮಾತಿನಲ್ಲೇ ಇದೆ. 10 ದಿನ ಕಳೆದರೂ ಬೆಡ್ ವ್ಯವಸ್ಥೆ ಮಾತ್ರ ಆಗಿಲ್ಲ.

14 ದಿನಗಳ ಕೊರೊನಾ ಕರ್ಫ್ಯೂ ವಿಫಲವಾಗಿದೆ ಎನ್ನುವ ತೀರ್ಮಾನಕ್ಕೆ ಸರ್ಕಾರ ಬಂದಂತ್ತಿದ್ದು, ಕಳೆದ ಬಾರಿಯಂತೆ ಸಂಪೂರ್ಣ ಲಾಕ್​​ಡೌನ್ ಮಾಡುವುದೊಂದೇ ಪರಿಹಾರ ಎನ್ನುವ ಚಿಂತನೆ ಆರಂಭಿಸಿದೆ.

# ಎರಡು ತಿಂಗಳು ಪಡಿತರ ವಿತರಣೆ
ಲಾಕ್‍ಡೌನ್‍ನಿಂದ ಎಲ್ಲವೂ ಬಂದ್ ಆಗಲಿರುವ ಕಾರಣ ಎರಡು ತಿಂಗಳು ಆಹಾರ ಧಾನ್ಯ ವಿತರಣೆಗೆ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಪಡಿತರ ವಿತರಣೆಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಮುಂದಿನ 2 ತಿಂಗಳು ಹೆಚ್ಚುವರಿ ಪಡಿತರ ವಿತರಣೆಗೆ ಸಿದ್ಧತೆ ಮಾಡಿದ್ದು, ಮೇ 11ರಿಂದಲೇ ಹೆಚ್ಚುವರಿ ಅಕ್ಕಿ-ಬೇಳೆ ನೀಡಲು ಮುಂದಾಗುವ ಸಾಧ್ಯತೆಯಿದೆ. ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ ಹೆಚ್ಚುವರಿ ಅಕ್ಕಿ ವಿತರಿಸಲಾಗುತ್ತದೆ. ಮೇ-ಜೂನ್‍ನಲ್ಲಿ ಹೆಚ್ಚುವರಿ ಅಕ್ಕಿ, ರಾಗಿ, ಗೋಧಿ, ಜೋಳ ನೀಡಲು ಸಿದ್ಧತೆ ನಡೆದಿದೆ.

ಅಂತ್ಯೋದಯ ಯೋಜನೆಯಲ್ಲಿ ಮೇ, ಜೂನ್‍ನಲ್ಲಿ ತಲಾ 35 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡ್‍ಗೆ ತಲಾ ಒಬ್ಬರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಕೇಂದ್ರದ 5 ಕೆಜಿ, ರಾಜ್ಯದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿ ವಿತರಿಸಲು ಪ್ಲಾನ್ ಮಾಡಲಾಗುತ್ತದೆ. ರಾಗಿ ಬಳಸುವ ಪ್ರದೇಶದಲ್ಲಿ 3 ಕೆಜಿ ರಾಗಿ, 7 ಕೆಜಿ ಅಕ್ಕಿ, 2 ಕೆಜಿ ಗೋಧಿ, ಅಕ್ಕಿಯನ್ನು ಬಳಸುವ ಭಾಗದಲ್ಲಿ 7 ಕೆಜಿ ಅಕ್ಕಿ, 3 ಕೆಜಿ ಜೋಳ, 3 ಕೆಜಿ ಗೋಧಿ ವಿತರಿಸುವ ಸಾಧ್ಯತೆಯಿದೆ.

Facebook Comments

Sri Raghav

Admin