ಹೆಚ್ಚು ಕೊರೋನಾ ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.7-ದೇಶದಲ್ಲಿ ಕಿಲ್ಲರ್ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಭಾರತದ ಅತ್ಯಧಿಕ ಸೋಂಕಿನ ಹತ್ತು ರಾಜ್ಯಗಳಲ್ಲಿ ಕರ್ನಾಟಕ ಒಂಭತ್ತನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರ (82,968), ತಮಿಳುನಾಡು(30,152), ದೆಹಲಿ (27,654), ಗುಜರಾತ್(19,592), ರಾಜಸ್ತಾನ(10,337), ಉತ್ತರಪ್ರದೇಶ(9,733), ಮಧ್ಯಪ್ರದೇಶ(9,228), ಪಶ್ಚಿಮ ಬಂಗಾಳ (7,738), ಕರ್ನಾಟಕ(5,213), ಮತ್ತು ಬಿಹಾರ(4.915), ಅನುಕ್ರಮವಾಗಿ ಟಾಪ್‍ಟೆನ್ ಅತ್ಯಧಿಕ ಸೋಂಕು ಪೀಡಿತ ರಾಜ್ಯಗಳಾಗಿವೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಈ 10 ರಾಜ್ಯಗಳು ದೇಶದಲ್ಲಿ ಈವರೆಗೆ ಸಂಭವಿಸಿರುವ ಸಾವಿನ ಪ್ರಮಾಣದಲ್ಲಿ ಶೇ.95 ಹಾಗೂ ಸೋಂಕು ಪ್ರಕರಣದಲ್ಲಿ ಶೇ.84ರಷ್ಟು ಪಾಲು ನೀಡಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

# ಸೋಂಕು ಮತ್ತಷ್ಟು ಉಲ್ಬಣ:
ಇನ್ನೆರಡು ಮೂರು ತಿಂಗಳುಗಳಲ್ಲಿ ದೇಶದಲ್ಲಿ ಕೊರೊನಾ ಹಾವಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಪಾಸಿಟಿವ್ ಪ್ರಕರಣಗಳು ಅಧಿಕವಾಗಿರುವ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಸಮುದಾಯ ಸೋಂಕಿನ ಭೀತಿ ದಟ್ಟವಾಗಿದೆ.

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಿರ್ದೇಶಕ ರಣದೀಪ್ ಗುಲೇರಿಯಾ ವಿಶೇಷ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮುಂದಿನ ಎರಡು-ಮೂರು ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಮತ್ತಷ್ಟು ಹೆಚ್ಚಾಗಲಿವೆ ಎಂಧು ಅವರು ಮನ್ಸೂಚನೆ ನೀಡಿದ್ದಾರೆ.

ದೇಶದಲ್ಲಿ ಸಮುದಾಯ ಸೋಂಕಿನ ಸದ್ಯಕ್ಕೆ ಇಲ್ಲವಾದರೂ, ಹಾಟ್‍ಸ್ಪಾಟ್ ಮತ್ತು ಕೆಂಪು ವಲಯಗಳಲ್ಲಿ ಕಮ್ಯೂನಿಟಿ ಇನ್‍ಫೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ದೆಹಲಿಯಲ್ಲಿ ಜೂನ್ ಅಂತ್ಯದ ವೇಳೆಗೆ 1 ಲಕ್ಷ ಕೊರೊನಾ ಕೇಸ್‍ಗಳು ಪತ್ತೆಯಾಗುವ ಆತಂಕವಿದೆ.

# ಸೆಪ್ಟಂಬರ್‍ನಲ್ಲಿ ನಿರಾಳ:
ಈ ಮಧ್ಯೆ ಮತ್ತೊಂದು ವರದಿ ಪ್ರಕಾರ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಗಮನಾರ್ಹವಾಗಿ ಕ್ಷೀಣಿಸಲಿದ್ದು, ಇದೇ ತಿಂಗಳ ಅಂತ್ಯದಲ್ಲಿ ಹೆಮ್ಮಾರಿ ತೊಲಗಲಿದೆ.  ಆರೋಗ್ಯ ಕ್ಷೇತ್ರದ ಖ್ಯಾತ ತಜ್ಞರು ಮತ್ತು ವೈದ್ಯಕೀಯ ಸಂಶೋಧಕರು ಹೇಳಿರುವಂತೆ ಕೋವಿಡ್-19 ವೈರಸ್ ಭಾರತಕ್ಕೆ ಮತ್ತೆ ನವೆಂಬರ್ ಅಂತ್ಯದಲ್ಲಿ ದಾಳಿ ಇಡುವ ಆತಂಕವೂ ಇದೆ.

Facebook Comments