ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಘಾಟು, ಖ್ಯಾತ ನಟ-ನಟಿಯರ ನಂಟು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.27- ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ದೊಡ್ಡ ಡ್ರಗ್ಸ್ ದಂಧೆ ಬಯಲಾಗಿರುವ ಬೆನ್ನಲ್ಲೇ ಈ ಪ್ರಕರಣದ ಹಿಂದೆ ಕನ್ನಡದ ಖ್ಯಾತ ನಟ-ನಟಿಯರು ಹಾಗೂ ಸಂಗೀತ ನಿರ್ಮಾಪಕರು ಸೇರಿದಂತೆ ಕೆಲ ಗಣ್ಯರು ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಕಿಂಗ್‍ಪಿನ್ ಎಂದೇ ಹೇಳಲಾಗುತ್ತಿರುವ ರೆಹಮಾನ್.ಕೆ ನೀಡಿದ ಸುಳಿವಿನ ಮೇರೆಗೆ ಎಂ.ಅನೂಪ್, ಆರ್.ರವೀಂದ್ರನ್ ಮತ್ತು ಅಂಕಿತ.ಡಿ ಎಂಬುವರನ್ನು ಮಾದಕ ದ್ರವ್ಯ ದಳದ ಪೊಲೀಸರು ಬಂಸಿದ್ದಾರೆ.

ಕೆಲ ದಿನಗಳ ಹಿಂದೆ ಎನ್‍ಸಿಬಿ ವಿಶೇಷ ಕಾರ್ಯಾಚರಣೆ ತಂಡ ಖಚಿತ ಸುಳಿವಿನ ಮೇರೆಗೆ ಬೆಂಗಳೂರು ಹೊರವಲಯದ ಕಲ್ಯಾಣನಗರದ ರಾಯಲ್‍ಸೂಟ್ ಎಂಬ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿತ್ತು.

ಹೊರರಾಜ್ಯಗಳಿಂದ ಮಾದಕ ವಸ್ತುಗಳನ್ನು ತಂದು ನಟನಟಿಯರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ಮಾಪಕರು ಸೇರಿದಂತೆ ಮತ್ತಿತರರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿತ್ತು.

ಮುಂಬೈ, ಚೆನ್ನೈ, ಪಣಜಿ ಸೇರಿದಂತೆ ಮತ್ತಿತರ ನಗರಗಳಿಂದ ಮಾದಕ ವಸ್ತುಗಳಾದ ಡ್ರಗ್ಸ್, ಅಫೀಮ್, ಗಾಂಜಾ ಸೇರಿದಂತೆ ಮತ್ತಿತರ ಅಮಲು ಏರಿಸುವ ವಸ್ತುಗಳನ್ನು ಖರೀದಿಸಿ ಅಪಾರ್ಟ್‍ಮೆಂಟ್‍ನಲ್ಲಿ ರೆಹಮಾನ್.ಕೆ ಸಂಗ್ರಹಿಸಿಟ್ಟಿದ್ದ.

ಮುಖ್ಯವಾಗಿ ಈತ ಎಂ.ಅನೂಪ್, ಆರ್. ರವೀಂದ್ರನ್ ಹಾಗೂ ಅಂಕಿತ.ಡಿ ಎಂಬುವರನ್ನು ಮಧ್ಯವರ್ತಿಗಳನ್ನಾಗಿ ಇಟ್ಟುಕೊಂಡು ಸ್ಯಾಂಡಲ್‍ವುಡ್‍ನ ನಟನಟಿಯರು, ನಿರ್ಮಾಪಕರು, ಉತ್ತರ ಭಾರತದ ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದರು.

ಬೆಂಗಳೂರಿಗೆ ಹೊರಭಾಗದಿಂದ ಮಾದಕ ವಸ್ತುಗಳು ವ್ಯಾಪಕವಾಗಿ ಬರುತ್ತಿರುವುದರ ಬಗ್ಗೆ ಮಾದಕ ದ್ರವ್ಯ ದಳದ ಅಕಾರಿಗಳು ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆ.21ರಂದು ಕಲ್ಯಾಣನಗರದ ರಾಯಲ್‍ಸೂಟ್ ಅಪಾರ್ಟ್‍ಮೆಂಟ್‍ನಲ್ಲಿ ದಾಳಿ ನಡೆದ ವೇಳೆ 2.20 ಲಕ್ಷ ನಗದು, 145 ನಮೂನೆಯ ಮಾದಕವಸ್ತು, 96 ಎಂಬ ಮತ್ತೊಂದು ನಮೂನೆಯ ಗಾಂಜಾ, 180ಎಲ್‍ಎಸ್‍ಡಿ, ನಿಕೋ ಸೇರಿದಂತೆ ಮತ್ತಿತರ ಮತ್ತೇರುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ರೆಹಮಾನ್‍ನನ್ನು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಸ್ಯಾಂಡಲ್‍ವುಡ್‍ನ ಗಣ್ಯರಿಗೆ ಮಾರಾಟ ಮಾಡುತ್ತಿರುವುದನ್ನು ಬಹಿರಂಗಪಡಿಸಿದ್ದಾನೆ.
2500ದಿಂದ 5000 ವರೆಗೂ ಈತ ಚಿತ್ರರಂಗದ ಗಣ್ಯರಿಗೆ ಸರಬರಾಜು ಮಾಡುತ್ತಿದ್ದ. ಇದೀಗ ಎನ್‍ಸಿಬಿ ಅಕಾರಿಗಳು ಇದರ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

Facebook Comments

Sri Raghav

Admin