ದಂಡ ಪ್ರಕ್ರಿಯ ಸಂಹಿತೆ ವಿಧೇಯಕಕ್ಕೆ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಸಾಕ್ಷಿಯ ಸಾಕ್ಷ್ಯವನ್ನು ಅಪರಾಧದ ಆರೋಪಿತ ವ್ಯಕ್ತಿಯ ವಕೀಲನ ಸಮಕ್ಷಮದಲ್ಲಿ ಆಡಿಯೋ-ವೀಡಿಯೋ ವಿದ್ಯುನ್ಮಾನ ವಿಧಾನಗಳ ಮೂಲಕ ದಾಖಲಿಸಲು ಅವಕಾಶ ಕಲ್ಪಿಸುವ ದಂಡ ಪ್ರಕ್ರಿಯ ಸಂಹಿತೆ (ಕರ್ನಾಟಕ ತಿದ್ದುಪಡಿ ವಿಧೇಯಕ) 2021ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯಿತು. ಶಾಸನ ರಚನಾ ಕಲಾಪದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ ಈ ವಿಧೇಯಕಕ್ಕೆ ಸರ್ವಾನುಮತದ ಒಪ್ಪಿಗೆ ದೊರೆಯಿತು.

ಸಾಕ್ಷಿಯ ಸಾಕ್ಷ್ಯವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಪಡೆಯುವ ಉದ್ದೇಶದಿಂದ ದಂಡ ಪ್ರಕ್ರಿಯ ಸಂಹಿತೆ 1973ಕ್ಕೆ (1914ರ ಕೇಂದ್ರ ಅಧಿನಿಯಮ-2) ತಿದ್ದುಪಡಿ ತರಲಾಗಿದೆ. ಇದರಿಂದ ದೂರದ ಊರುಗಳಿಗೆ ಸಾಕ್ಷಿಗಳು ಹೋಗುವುದು ತಪ್ಪಲಿದೆ. ಉಳಿದೆಲ್ಲವೂ ಎಥಾವತ್ತಾಗಿ ದಂಡ ಪ್ರಕ್ರಿಯ ಸಂಹಿತೆಯಲ್ಲಿ ಇರುತ್ತದೆ ಎಂದು ಗೃಹ ಸಚಿವರು ಚರ್ಚೆಯ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

ಮಾಜಿ ಸಭಾಧ್ಯಕ್ಷ ಕೆ.ಜಿ.ಭೋಪಯ್ಯ ಅವರು ಭಾಷಂತರಕಾರರ ಅಗತ್ಯವಿದ್ದಾಗ ಯಾವ್ಯಾವ ವ್ಯವಸ್ಥೆ ಇರುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಚರ್ಚೆ ನಂತರ ವಿಧೇಯಕವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಕ್ಕೆ ಹಾಕಿದಾಗ ಧ್ವನಿಮತದ ಅನುಮೋದನೆ ದೊರೆಯಿತು. ಶಾಂತಿಭಂಗ, ಹಿಂಸಾಚಾರದ ಪರಿಣಾಮಕಾರಿ ನಿಗಾವಣೆ ಪ್ರತಿಬಂಧಕ್ ಆಗಿ ಅಪರಾಧಿಯ ಅಳತೆಗಳು ಪದದ ಪರಿಭಾಷೆಯಲ್ಲಿ ರಕ್ತ, ಡಿಎನ್‍ಎ, ಧ್ವನಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಒಳಗೊಳ್ಳುವ ಉದ್ದೇಶದ ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2021ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿತು.

ಗೃಹ ಸಚಿವ ಆರಗಜ್ಞಾನೇಂದ್ರ ಮಂಡಿಸಿದ ಈ ವಿಧೇಯಕವು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ್ ಜೊತೆಗೆ ಪೊಲೀಸ್ ಎಸ್‍ಪಿ ಅಥವಾ ಪೊಲೀಸ್ ಉಪ ಆಯುಕ್ತರಿಗೆ ಅಳತೆಗಳನ್ನು ಸಂಗ್ರಹಿಸಲು ಆದೇಶಿಸುವ ಅಧಿಕಾರವನ್ನು ನೀಡುವುದರಿಂದ ನಿವಾರಿಸಬಹುದಾದ ವಿಳಂಬವನ್ನು ತೆಗೆದುಹಾಕುವುದು ಮತ್ತು ಪೊಲೀಸರ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡುವುದು ಇದರಿಂದಾಗಿ ಹೆಚ್ಚಿನ ರಚನಾತ್ಮಕ ಮತ್ತು ಕ್ರಿಯಾತ್ಮಕ ಜವಾಬ್ದಾರಿಗಳನ್ನು ಉಪಯೋಗಿಸುವ ಉದ್ದೇಶ ಹೊಂದಿದೆ.

10 ವರ್ಷಗಳ ನಂತರ ನ್ಯಾಯಾಲಯ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ಸೂಪರಿಟೆಂಡೆಂಟ್ ಅಥವಾ ವಿಭಾಗೀಯ ಮಾಜಿಸ್ಟ್ರೇಟ್ ಅಥವಾ ಪೊಲೀಸ್ ಉಪ ಆಯುಕ್ತರ ನಿರ್ದೇಶನದ ಹೊರತು ಅಳತೆಗಳ ನಾಶಕ್ಕಾಗಿ ಇರುವ ಆದೇಶಕ್ಕೆ ಪೊಲೀಸ್ ಸೂಪರಿಟೆಂಡೆಂಟ್ ಅಥವಾ ಪೊಲೀಸ್ ಉಪ ಆಯುಕ್ತರಿಗೆ ಅಧಿಕಾರವನ್ನು ನೀಡುವ ಉದ್ದೇಶವನ್ನು ಹಿಂದಿದೆ. ರಾಜ್ಯಕ್ಕೆ ಅನ್ವಯವಾಗುವಂತೆ ತಿದ್ದುಪಡಿ ತರಲಾಗಿದೆ.

Facebook Comments